ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾವಿನ ಕೇಕೆ ಹಾಕುತ್ತಿದೆ. ಕೇಸ್ ಕಡಿಮೆಯಾದರೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ನೆನ್ನೆ ಒಂದೇ ದಿನ ಕೊರೋನಾ ಮಹಾ ಮಾರಿಗೆ 52 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದ್ದು, ಕಳೆದ 24 ಗಂಟೆಯಲ್ಲಿ 41,400 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನೆನ್ನೆ ಒಂದೇ ದಿನ ಕೊರೋನಾ ಸೋಂಕಿಗೆ 52 ಜನರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 19,105 ಜನರಿಗೆ ಸೋಂಕು ತಗುಲಿದ್ದು, 19 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇಕಡಾ 26.70ರಷ್ಟಿದ್ದು, ಬೆಂಗಳೂರು ನಂತರ ಕೋಲಾರ, ಮೈಸೂರು, ಹಾಸನ, ತುಮಕೂರು, ಧಾರವಾಡದಲ್ಲಿ ಸಾವಿರಕ್ಕಿಂತ ಹೆಚ್ಚು ಕೇಸ್ ಪತ್ತೆಯಾಗಿದ್ದು, ಜಿಲ್ಲೆಗಳಲ್ಲಿ ಕೊರೋನಾರ್ಭಟ ಹೆಚ್ಚಾಗುತ್ತಿದೆ.
ಇದನ್ನೂ ಓದಿ: ಮಹೀಂದ್ರಾ ಶೋರೂಂ ಸಿಬ್ಬಂದಿಯಿಂದ ರೈತನಿಗೆ ಅವಮಾನ… ವಿಷಾದ ವ್ಯಕ್ತಪಡಿಸಿದ ಆನಂದ್ ಮಹೀಂದ್ರಾ…