ಬೆಂಗಳೂರು : ರಾಜ್ಯಕ್ಕೆ ಎರಡು ವಾರ ಡೇಂಜರ್ ಆಗಲಿದ್ದು, ದಿನಕ್ಕೆ 1.20 ಲಕ್ಷ ಕೇಸ್ ವರದಿಯಾಗಲಿವೆ ಎಂದು ಕೊರೋನಾ ಸೋಂಕಿನ ಬಗ್ಗೆ ತಜ್ಞರ ಟೀಂ ಸ್ಫೋಟಕ ರಿಪೋರ್ಟ್ ಕೊಟ್ಟಿದೆ.
ಬೆಂಗಳೂರು ಒಂದರಲ್ಲೇ ದಿನಕ್ಕೆ 30-40 ಸಾವಿರ ಕೇಸ್ ದಾಖಲಾಗುವ ಸಾಧ್ಯತೆಗಳಿದ್ದು, ತಜ್ಞರ ರಿಪೋರ್ಟ್ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಆತಂಕ ವ್ಯಕ್ತ ಪಡಿಸಿದ್ದಾರೆ. ದೆಹಲಿ, ಮುಂಬೈ ಮಾದರಿಯಲ್ಲಿ ಕೊರೋನಾ ಮೀಟರ್ ಏರಲಿದ್ದು, ದಿನಕ್ಕೆ 80 ಸಾವಿರದಿಂದ 1.20 ಲಕ್ಷ ಕೇಸ್ ದಿನಕ್ಕೆ ಪತ್ತೆಯಾಗಬಹುದು. 2ನೇ ಅಲೆಗಿಂತ 4-5 ಪಟ್ಟು ವೇಗವಾಗಿ ಕೊರೋನಾ ಹರಡುತ್ತಿದೆ. ರಾಜ್ಯದಲ್ಲಿ ಈಗಾಗಲೇ ಆ್ಯಕ್ಟೀವ್ ಕೇಸ್ 2.50 ಲಕ್ಷಕ್ಕೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲೇ 1.80 ಕೊರೋನಾ ಕೇಸ್ ಸಕ್ರಿಯವಾಗಿದೆ. ಬೆಂಗಳೂರಿನಲ್ಲಿ ವಾರದಿಂದ ವಾರಕ್ಕೆ ಶೇ.250ರಷ್ಟು ಏರಿಕೆಯಾಗುತ್ತಿದ್ದು, ಜನವರಿ 10ರಂದು 810 ಕೇಸ್ ದಾಖಲಾಗಿದ್ದು, ನೆನ್ನೆ 25595 ಕೇಸ್ ಪತ್ತೆಯಾಗಿದೆ. ನೆನ್ನೆ ಒಂದೇ ದಿನ ರಾಜ್ಯದಲ್ಲಿ 41,457 ಕೇಸ್ ದಾಖಲಾಗಿದೆ.