ಬೆಂಗಳೂರು : ಬೆಂಗಳೂರು ಮೆಟ್ರೋ ಪಿಲ್ಲರ್ ದುರಂತ ಪ್ರಕರಣದಲ್ಲಿ ಐಐಟಿ ತಜ್ಞರು ಪರಿಶೀಲನಾ ವರದಿ ಸಿದ್ಧಪಡಿಸಿದ್ದಾರೆ. 12 ಅಡಿ ಎತ್ತರದ ಮೆಟ್ರೊ ಪಿಲ್ಲರ್ ನಿರ್ಮಾಣ ಅವೈಜ್ಞಾನಿಕ ಎಂದಿದ್ದಾರೆ.
ಹೆಣ್ಣೂರು ಕ್ರಾಸ್ ಬಳಿ ನಿರ್ಮಾಣ ಹಂತದ ಪಿಲ್ಲರ್ ಉರುಳಿ ಬಿದ್ದಿದ್ದು, ಹೈದರಾಬಾದ್ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪರಿಶೀಲಿಸಿತ್ತು. ಪೊಲೀಸರ ಕೋರಿಕೆ ಮೇರೆಗೆ ತಜ್ಞರು ಜನವರಿ 13ರಂದು ಸ್ಥಳಕ್ಕೆ ಭೇಟಿ ನೀಡಿದ್ದರು.
ಐಐಟಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಸ್. ಸುರಿಯಾ ಪ್ರಕಾಶ್, ಪ್ರಾಧ್ಯಾಪಕ ಡಾ. ಸುಬ್ರಮಣಿಯಂ ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಿದ್ದಾರೆ. ಮಾದರಿಗಳ ಪರೀಕ್ಷೆ ಹಾಗೂ ಎಂಜಿನಿಯರ್‌ಗಳ ಹೇಳಿಕೆ ಆಧರಿಸಿ ವರದಿ ನೀಡಿದ್ದಾರೆ.
IIT ತಜ್ಞರು BMRCL, ನಾಗಾರ್ಜುನ್ ಕನ್‌ಸ್ಟ್ರಕ್ಷನ್ ಕಂಪನಿ (NCC) ಎಂಜಿನಿಯರ್‌ಗಳ ನಿರ್ಲಕ್ಷ್ಯದ ಅಂಶವನ್ನು ವರದಿಯಲ್ಲಿ ಎತ್ತಿಹಿಡಿದಿದ್ದಾರೆ. ಕಬ್ಬಿಣ ಪಿಲ್ಲರ್ ನಿರ್ಮಾಣ ಮಾಡುವಾಗ ಕೆಲ ಹಂತಗಳ ಕಡ್ಡಾಯ ಪರಿಶೀಲನೆ ಅಗತ್ಯವಾಗಿದೆ.
ಮೆಟ್ರೊ ಪಿಲ್ಲರ್ ನಿರ್ಮಾಣದಲ್ಲಿ ಕೆಲ ಹಂತಗಳನ್ನೇ ಕೈಬಿಡಲಾಗಿದೆ, ಆಸರೆ ಇಲ್ಲದೇ 12 ಅಡಿ ಎತ್ತರದ ಕಬ್ಬಿಣದ ಚೌಕಟ್ಟು ಉರುಳಿಬಿದ್ದಿದೆ. ಕಡಿಮೆ ಸಮಯದಲ್ಲಿ ಪಿಲ್ಲರ್ ನಿರ್ಮಿಸುವ ಅವಸರದಿಂದ ಅವಘಡ ಸಂಭವಿಸಿದೆ. ಎಂಜಿನಿಯರ್‌ಗಳು ಅವೈಜ್ಞಾನಿಕ ಕಾಮಗಾರಿ ನಡೆಸಿರುವುದು ಪತ್ತೆಯಾಗಿದೆ.
ತಜ್ಞರು ಗೋವಿಂದಪುರ ಠಾಣೆ ಪೊಲೀಸರಿಗೆ ವರದಿ ಸಲ್ಲಿಸಿದ್ದಾರೆ.ಎಂಜಿನಿಯರ್‌ಗಳು 12 ಅಡಿಗೂ ಎತ್ತರದ ಪಿಲ್ಲರ್ಗಳನ್ನು ಗುರುತಿಸುತ್ತಿದ್ದು, ಅವೈಜ್ಞಾನಿಕ ಅಂತಾ ಗೊತ್ತಿದ್ರೂ ಲಂಚದ ಆಸೆಗಾಗಿ ಕಾಮಗಾರಿ ಮುಂದುವರಿಕೆ ಮಾಡಿದ್ದಾರೆ. ಪೊಲೀಸರು ಈ ಮಾಹಿತಿ ಅಡಿಯಲ್ಲೂ ತನಿಖೆ ಮಾಡುತ್ತಿದ್ದಾರೆ. ಪೊಲೀಸರು ಈಗಾಗಲೇ ಮೆಟ್ರೋ MD, NCC ಎಂಜಿನಿಯರ್‌ಗಳ ವಿಚಾರಣೆ ನಡೆಸುತ್ತಿದ್ದಾರೆ.