ದೇಹ ಮತ್ತು ಆರೋಗ್ಯಕ್ಕೆ ಒಳ್ಳೆಯ ಆಹಾರವೆಂದು ಅದನ್ನೇ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಯಾವುದೇ ಆಹಾರ ಸೇವಿಸುವುದಿದ್ದರೂ ಇತಿಮಿತಿ ಇರಬೇಕು. ಕೆಲವು ಆಹಾರವು ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಾದರೆ ಅದನ್ನು ಅತಿಯಾಗಿ ಸೇವಿಸುತ್ತಾರೆ. ಆದರೆ ಅದು ಅತಿಯಾದರೆ ಒಳ್ಳೆಯದಲ್ಲ. ಅದರಲ್ಲಿಯೂ ಕೆಲವು ಆಹಾರವಂತೂ ಸೇವಿಸಿದರೆ ಸಮಸ್ಯೆ ಕಾಡುವುದು ಗ್ಯಾರೆಂಟಿ. ಹಾಗಾದ್ರೆ ಆ ಆಹಾರಗಳಾವುವು ಗೊತ್ತಾ ಈ ಸ್ಟೋರಿ ಓದಿ.
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುವುದು. ಹಾಗಾಗಿ ಆರಂಭದಲ್ಲಿಯೇ ಈ ಸಮಸ್ಯೆಯನ್ನು ನಿವಾರಣೆ ಮಾಡಬೇಕು. ಆದ್ದರಿಂದ ಈ ಆಹಾರಗಳಿಂದ ಆದಷ್ಟು ದೂರವಿರಿ.
ಆಲ್ಕೋಹಾಲ್ ಸೇವನೆ ಮಲಬದ್ಧತೆಗೆ ಕಾರಣವಾಗುತ್ತದೆ. ಅತಿಯಾಗಿ ಆಲ್ಕೋಹಾಲ್ ಸೇವಿಸುವುದರಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಸಂಸ್ಕರಿಸಿದ ಧಾನ್ಯಗಳು ಮತ್ತು ಅವುಗಳ ಉತ್ಪನ್ನಗಳಾದ ಬಿಳಿ ಅಕ್ಕಿ, ಪಾಸ್ಟಾ, ಬಿಳಿ ಬ್ರೆಡ್ ಮಲಬದ್ಧತೆಗೆ ಕಾರಣವಾಗುತ್ತದೆ. ಇವುಗಳಲ್ಲಿ ಕಡಿಮೆ ಫೈಬರ್ ಅಂಶವಿದೆ. ಹಾಗಾಗಿ ಇವುಗಳನ್ನು ಹೆಚ್ಚು ಸೇವಿಸಬೇಡಿ.
ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ಕೆಂಪು ಮಾಂಸದಲ್ಲಿ ಅಧಿಕ ಕೊಬ್ಬು ಮತ್ತು ಫೈಬರ್ ಕಡಿಮೆ ಇರುತ್ತದೆ. ಇದು ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ. ಅಂಟು ಅಂಟಾದ ಆಹಾರಗಳನ್ನು ಹೆಚ್ಚು ಸೇವಿಸಬೇಡಿ. ಹುರಿದ ಆಹಾರದಲ್ಲಿ ಫೈಬರ್ ಅಂಶ ಕಡಿಮೆ ಇರುತ್ತದೆ. ಹಾಗಾಗಿ ಹುರಿದ ಆಹಾರಗಳಿಂದ ದೂರವಿರಿ.