ತುಮಕೂರು: ಕಾರ್ ರಿಲೀಸ್ ಮಾಡಲು 12 ಸಾವಿರ ಲಂಚ ಪಡೆದು ಎಸಿಬಿಗೆ ಸಿಕ್ಕಿಬಿದ್ದಿದ್ದ ಕಾನ್ಸ್ಟೇಬಲ್ ಜಾಮೀನ್ ಅರ್ಜಿಯನ್ನ ಹೈಕೋರ್ಟ್ ವಜಾ ಮಾಡಿದೆ.
ಗುಬ್ಬಿ ತಾಲೂಕಿನ C.S ಪುರ ಠಾಣೆಯ ಕಾನ್ಸ್ಟೇಬಲ್ ನಯಾಜ್, ಕಾರ್ ರಿಲೀಸ್ಗೆ 12 ಸಾವಿರ ಲಂಚ ಪಡೆದಿದ್ದು, ಹಣ ಪಡೆಯುವಾಗ ನಯಾಜ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದದ್ದ . ಎಸಿಬಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ 7(a) ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ವಿಶೇಷ ಕೋರ್ಟ್ ನಲ್ಲಿ ನಯಾಜ್ ಅಹ್ಮದ್ ಜಾಮೀನು ಅರ್ಜಿ ವಜಾ ಆಗಿತ್ತು. ಈ ಹಿನ್ನಲೆ ಜಾಮೀನಿಗಾಗಿ ನಯಾಜ್ ಹೈಕೋರ್ಟ್ ಮೋರೆ ಹೋಗಿದ್ದು, ಹೈಕೋರ್ಟ್ ಬಲವಾದ ಸಾಕ್ಷ್ಯ, ತನಿಖೆ ಬಾಕಿ ಹಿನ್ನೆಲೆಯಲ್ಲಿ ಬೇಲ್ ಅರ್ಜಿ ವಜಾ ಮಾಡಲಾಗಿದೆ.
ಇದನ್ನೂ ಓದಿ: ಓಮಿಕ್ರಾನ್ ಸೋಂಕು ಹೆಚ್ಚಳ…! ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆ…!