ಬೆಳಗಾವಿ : ಎಲೆಕ್ಷನ್ ಹತ್ರ ಬರ್ತಿದ್ದಂತೆ ಝಣಝಣ ಕಾಂಚಾಣ, ಸಾಹುಕಾರ್ ಹಣದ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ನವ್ರು 3000 ಕೊಟ್ರೆ, ನಾವ್ 6000 ಕೊಡ್ತೀವಿ, 10 ಕೋಟಿ ಬೇಕಾದ್ರೆ ಖರ್ಚಾಗಲಿ ಎಂದು ಬಹಿರಂಗವಾಗಿ ಹಣದ ಡೈಲಾಗ್ ಹೊಡೆದಿದ್ದಾರೆ.
ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಹಣದ ಡೈಲಾಗ್ ಹೊಡೆದಿದ್ದಾರೆ. ರಮೇಶ್ ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗುಡುಗಿದ್ದು, ಅವರು ಎಷ್ಟು ಖರ್ಚು ಮಾಡ್ತಾರೋ ಅದಕ್ಕಿಂತಾ ಡಬಲ್ ಖರ್ಚು ಮಾಡೋಣ. ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಅಂತಾ ಹೇಳಿರೋ ಜಾರಕಿಹೊಳಿ ಹೇಳಿದ್ದಾರೆ. ಜಾರಕಿಹೊಳಿ ಹಣದ ಡೈಲಾಗ್ಗೆ ಕಾರ್ಯಕರ್ತರ ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ. ಜಾರಕಿಹೊಳಿ ಆ ಶಿಳ್ಳೆ, ಚಪ್ಪಾಳೆ ಶಬ್ಧ ಕೇಳಿ ಉಡುಗೊರೆಯ ಭಾಷಣ ಮಾಡಿದ್ದಾರೆ.