ಕೋಲಾರ : ಕೋಲಾರದಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನವಾಗಲಿದ್ದು, ಕೋಲಾರ ಕ್ಷೇತ್ರದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಸಲಾಗುತ್ತದೆ. ಸಿದ್ದು ಸ್ಪರ್ಧೆ ಹಿನ್ನೆಲೆಯಲ್ಲಿ ಕೋಲಾರ ಮಹತ್ವ ಪಡೆದಿದೆ.
ಸಿದ್ದು-ಡಿಕೆಶಿ ನೇತೃತ್ವದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ. ಕೋಲಾರ ಹೊರ ವಲಯದ ಟಮಕ ಬಳಿ ಸಮಾವೇಶ
ಸಮಾವೇಶಕ್ಕೆ 60 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷಯಿದೆ. ಜಿಲ್ಲೆಯ 6 ತಾಲೂಕುಗಳಿಂದ ತಲಾ 10 ಸಾವಿರ ಜನ ಬರುವ ಸಾಧ್ಯತೆಗಳಿವೆ. ಕಾಂಗ್ರೆಸ್ ಕೋಲಾರದ ಐದು ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿದೆ. ಸುಮಾರು 12 ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣವಾಗಿದೆ. 55 ಸಾವಿರ ಚೇರ್, ಗಣ್ಯರ ವೇದಿಕೆಗೆ ಜರ್ಮನ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ಕೋಲಾರದ ಬಣಗಳು ಒಗ್ಗಟ್ಟು ಪ್ರದರ್ಶನ ಮಾಡಲಿವೆಯೇ..? K.H.ಮುನಿಯಪ್ಪ ಬಣ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾ..? ರಮೇಶ್ ಕುಮಾರ್ ಟೀಂ ಸಮಾವೇಶದ ಸಿದ್ದತಾ ಕಾರ್ಯ ನೋಡಿಕೊಳ್ತಿದೆ. ಕೆ.ಹೆಚ್.ಮುನಿಯಪ್ಪ ಬಣ ಕೇವಲ ಬ್ಯಾನರ್ಗಷ್ಟೇ ಸೀಮಿತವಾಗಿದೆ.