ದೆಹಲಿ: ರಾಹುಲ್ ಗಾಂಧಿ ಅವರನ್ನು ED ನಿರಂತರವಾಗಿ ವಿಚಾರಣೆ ಮಾಡುತ್ತಿರುವ ಹಿನ್ನಲೆ, ಇಂದು ದೆಹಲಿಯಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ದೆಹಲಿಯಲ್ಲಿ ಇಂದು ರಾಜ್ಯ ಕಾಂಗ್ರೆಸ್ ರಣಕಹಳೆ ಊದಲಿದ್ದು, ರಾಹುಲ್ ವಿಚಾರಣೆ ಖಂಡಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಜ್ಯ ಕಾಂಗ್ರೆಸಿಗರು ದೆಹಲಿ ಸೇರಿಕೊಂಡಿದ್ದು, MLA, MLC, KPCC ಪದಾಧಿಕಾರಿಗಳಿಂದ ಹೋರಾಟ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವ ವಹಿಸಿದ್ದು, ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೂ ಪ್ರತಿಭಟನಾ ಱಲಿ ಸಾಗಲಿದೆ. ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಸಿದ್ದರಾಮಯ್ಯ ಹೊರಟಿದ್ದಾರೆ. ಈಗಾಗಲೆ ನೆನ್ನೆಯೇ ದೆಹಲಿ ತಲುಪಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಡಿಕೆಶಿ, ಬಿಕೆ ಹರಿಪ್ರಸಾದ್, ಸೇರಿದಂತೆ ಕಾಂಗ್ರೆಸ್ ನಾಯಕರು ದೆಹಲಿಯತ್ತ ತೆರಳಿದ್ದಾರೆ.