ರಾಜ್ಯದಲ್ಲಿ ಸಂಚಲನ ಸೃಷ್ಠಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿ.ಡಿ ಬಹಿರಂಗವಾದ ದಿನದಿಂದ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿದೆ. ಇದೊಂದು ಷಡ್ಯಂತ್ರ ಮತ್ತು ಈ ಸಿ.ಡಿಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ರು. ಇನ್ನು ಇದೇ ವಿಚಾರ ಇಂದು ಸದನದಲ್ಲೂ ಪ್ರತಿಧ್ವನಿಸಿದೆ. ಸದ್ಯ ಸಿ.ಡಿ ವಿಚಾರವನ್ನು ವಿರೋಧ ಪಕ್ಷ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ನಿನ್ನೆಯಿಂದಲೂ ಸದನದಲ್ಲಿ ಅಲ್ಲೋಲ್ಲ ಕಲ್ಲೋಲ್ಲ ಎಬ್ಬಿಸಿರುವ ಸಿ.ಡಿ ವಿಚಾರ ಇಂದೇನಾಯ್ತು ಈ ಸ್ಟೋರಿ ನೋಡಿ.
ಸಿ.ಡಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ನಿನ್ನೆ ಚರ್ಚೆ ವೇಳೆ ಹೇಳಿದ್ರು. ಇಂದೂ ಕೂಡ ಸದನದಲ್ಲಿ ಸಿ.ಡಿ ವಿಚಾರದಲ್ಲಿಯೇ ಚರ್ಚೆ ನಡೆಸಲಾಯಿತು. ಇಂದು ಬೆಳಗ್ಗೆ ಸದನದ ಸಮಾವೇಶ ಚರ್ಚೆ ಆರಂಭವಾಗುತ್ತಿದ್ದಂತೆಯೇ ಈ ಸಿ.ಡಿ ವಿಚಾರವನ್ನು ಸ್ವತಂತ್ರ ಸಂಸ್ಥೆಯಿಂದ ಚರ್ಚೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದರು. ಸಿ.ಡಿ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆಯನ್ನೂ ಕೂಗಿದ್ರು. ಈ ಎಲ್ಲಾ ಘಟನೆಗಳ ಬಳಿಕ ಸದನವನ್ನು ಮುಂದೂಡಿದ ಸ್ಪೀಕರ್ ಕಾಂಗ್ರೆಸ್ ನಾಯಕರ ಮನವೋಲಿಕೆಗೆ ನಿರ್ಧಾರ ಮಾಡಿದ್ರು. ಆದರೆ ಸ್ಪೀಕರ್ ಸಂಧಾನಕ್ಕೂ ಬಗ್ಗದ ಕಾಂಗ್ರೆಸ್ ನಾಯಕರು ತಮ್ಮ ಹೋರಾಟ ಮುಂದುವರೆಸುವುದಾಗಿ ಘೋಷಣೆ ಮಾಡಿದ್ರು.
ಸಿ.ಡಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿರುವ ಕಾಂಗ್ರೆಸ್ ನಾಯಕರು ನಾಳೆಯಿಂದ ಅಹೋರಾತ್ರಿ ಧರಣಿ ಮಾಡಲು ನಿರ್ಧರಿಸಿದ್ದಾರೆ. ಇನ್ನು ಅಹೋರಾತ್ರಿ ಧರಣಿಯ ರೂಪುರೇಷೆಯನ್ನು ಕಾಂಗ್ರೆಸ್ ನಾಯಕರು ನಾಳೆ ಬೆಳಗ್ಗೆ ನಿರ್ಧರಿಸಲಿದ್ದಾರೆ. ಎಂದು ತಿಳಿದು ಬಂದಿದೆ.