ಬೆಂಗಳೂರು: ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅಸಮಾಧಾನ ಹೊರಹಾಕಿರುವ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಸಿಎಂ ಇಬ್ರಾಹಿಂ ಯಾವಾಗ ಏನ್ ಮಾತಾಡುತ್ತಾರೋ ಗೊತ್ತಿಲ್ಲ , ಇಬ್ರಾಹಿಂಗೂ , ಕಾಂಗ್ರೆಸ್ಗೂ ಏನೇನಿದ್ಯೋ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಯತ್ನಾಳ್ ಅವರು ಇಬ್ರಾಹಿಂ ಒಂದ್ಸಲ ದೇವೇಗೌಡರನ್ನ ಅಪ್ಪಾ ಅಂತಾರೆ, ಇನ್ನೊಮ್ಮೆ ಸಿದ್ದರಾಮಯ್ಯನ ಅಣ್ಣಾ ಅಂತಾರೆ . ರಾಜಕೀಯದಲ್ಲಿ ಅಪ್ಪ.. ಅಣ್ಣ ಅನ್ನುವರು ಭಾರೀ ಡೇಂಜರ್ ಎಂದಿದ್ದಾರೆ.
ಇನ್ನು ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಅನಿವಾರ್ಯ ಎಂದಿರುವ ಮಾತಿಗೆ ಪ್ರತಿಕ್ರಿಯಿಸಿ ,ನಾನು MLA ಆಗಿಲ್ಲಅಂದರೆ ಯಾರೂ ಅಧಿಕಾರಕ್ಕೆ ಬರಲ್ವಾ..? ನಮಗೆ ಯಾರೂ ಅನಿವಾರ್ಯ ಅಲ್ಲ. BJP ಮತ್ತೆ ಅಧಿಕಾರಕ್ಕೆ ಬರುತ್ತದೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಕುಸ್ತಿ ಇರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ, ನಮ್ಮ ಮೇಲೆ ಅಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ರಾಸುಗಳ ಜಾತ್ರೆಗೆ ಬಂದ ರೈತರ ಮೇಲೆ ಪೊಲೀಸರ ಲಾಠಿ ಚಾರ್ಜ್… ಪೊಲೀಸರ ದೌರ್ಜನ್ಯ ಖಂಡಿಸಿ ಅನ್ನದಾತರ ಪ್ರತಿಭಟನೆ…