ಬೆಂಗಳೂರು : ಕಳೆದ 60 ವರ್ಷಗಳಿಂದ ದೇಶ ಲೂಟಿ ಹೊಡೆದಿದ್ದೇ ಕಾಂಗ್ರೆಸ್, ಯಾವುದೇ ಯೋಜನೆ ರೂಪಿಸಿದ್ರೂ ಅದರಲ್ಲಿ ಭ್ರಷ್ಟಾಚಾರ ಅಡಗಿತ್ತು ಎಂದು ಕಾಂಗ್ರೆಸ್ ವಿರುದ್ಧ ಸಚಿವ ಡಾ.ಸುಧಾಕರ್ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರಿನಲ್ಲಿ ಡಾ.ಸುಧಾಕರ್ ಮಾತನಾಡಿ ಲೋಕಾಯುಕ್ತ ಮುಚ್ಚಿ ಎಸಿಬಿಯನ್ನು ತಂದವರು ಯಾರು..?
ಭ್ರಷ್ಟಾಚಾರದ ದೂರು ದಾಖಲಾದಾಗ ಎದುರಿಸಲಿಲ್ಲ, ಎಲ್ಲೂ ಚರ್ಚೆ ಮಾಡದೆ ರಾತ್ರೋ ರಾತ್ರಿ ಎಸಿಬಿ ಜಾರಿಗೆ ತಂದ್ರು.
ಎಸಿಬಿ ವಿಚಾರದಲ್ಲಿ ಕೋರ್ಟ್ನಲ್ಲೇ ಅವರಿಗೆ ಮುಖಭಂಗವಾಯ್ತು. ಈಗ ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಬಲ ಕೊಟ್ಟಿದೆ. ರಸ್ತೆಗಳಿಗೆ ಈ ಹಿಂದೆ ಅಂದಾಜಿಗಿಂತ ಹೆಚ್ಚು ಹಣ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
ಇವರ ಅವಧಿಯಲ್ಲಿ ಬಿಬಿಎಂಪಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ಆಯ್ತು, ನಮ್ಮ ಮೇಲೆ ಕಮಿಷನ್ ಆರೋಪ ಮಾಡುವ ಕಾಂಗ್ರೆಸ್ ಬಳಿ ಸಾಕ್ಷಿಯೇ ಇಲ್ಲ-ಹತ್ತಾರು ಸಾವಿರ ಸೈಟುಗಳನ್ನು ಇವರು ಲುಕ್ಸಾನು ಮಾಡಿದ್ದಾರೆ. ಈ ಬಗ್ಗೆ ನಾವು ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ. ಬೆಂಗಳೂರನ್ನು ಗಾರ್ಬೆಜ್ ಸಿಟಿ ಮಾಡಿದ್ದು ಯಾರು ಎಂದು ಸುಧಾಕರ್ ಪ್ರಶ್ನೆ ಮಾಡಿದ್ದಾರೆ.