ಬೆಂಗಳೂರು: ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದಿದ್ದು, ಕಾಂಗ್ರೆಸ್ ನಾಯಕರುಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲಿದ್ದಾರೆ .ಸಿಎಂ ಮನೆ ಮುಂದೆ ಧರಣಿಗೆ ಕೈ ನಾಯಕರ ನಿರ್ಧರಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಹೆಚ್.ಕೆ.ಪಾಟೀಲ್, ಡಾ.ಜಿ ಪರಮೇಶ್ವರ್, ಧ್ರುವನಾರಾಯಣ್,
ಸಲೀಂ ಅಹ್ಮದ್, ಮೊಹ್ಮದ್ ನಲಪಾಡ್ ಮತ್ತಿತರರು ಸಾಥ್ ಕೊಡಲಿದ್ದು, ಕೆಲ ಹೊತ್ತಿನಲ್ಲೇ ಕಾಂಗ್ರೆಸ್ ಧರಣಿ ಶುರುವಾಗಲಿದೆ. ಕಾಂಗ್ರೆಸ್ ಭವನದಿಂದ ಸಿಎಂ ನಿವಾಸದವರೆಗೆ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದ್ದು, ನಂತರ ಸಿಎಂ ನಿವಾಸಕ್ಕೆ ಕಾಂಗ್ರೆಸ್ ಮುತ್ತಿಗೆ ಹಾಕಲಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪ ಕಾರಣ, ಕೂಡಲೇ ಈಶ್ವರಪ್ಪ ಬಂಧಿಸುವಂತೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದ್ದು, ಕಾಂಗ್ರೆಸ್ ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಐವರು ಇನ್ಸ್ಪೆಕ್ಟರ್ಗಳು, 20 ಪಿಎಸ್ಐಗಳು, 50 ಕಾನ್ಸ್ಟೇಬಲ್, KSRP ತುಕಡಿ ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ:4 ಕೋಟಿ ರಿಲೀಸ್ ಮಾಡದೇ ಅಂತ್ಯಕ್ರಿಯೆಗೆ ಅವಕಾಶ ಕೊಡಲ್ಲ: ಸಂತೋಷ್ ಪಾಟೀಲ್ ಸಂಬಂಧಿಕರಿಂದ ಬಿಗಿಪಟ್ಟು..!