ಬೆಂಗಳೂರು : ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿಗಾರರಿಗೆ 354ಕೋಟಿಯಲ್ಲಿ 20 ಕುರಿ 1 ಮೇಕೆ ನೀಡುವ ಯೋಜನೆ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಮುದಾಯದ ಮುಖಂಡರು ಸನ್ಮಾನಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಲದ ಮುಖಂಡರು ಸಿಎಂ ಭೇಟಿ ಮಾಡಿದರು. ಮಹಾಮಂಡಳ ಅಧ್ಯಕ್ಷ ಶರಣು ಬಿ ತಳ್ಳಿಕೇರಿ , ಉಪಾಧ್ಯಕ್ಷ ಕಾಶಿನಾಥ್ ಹುಡೇದ್ ಹಾಗೂ ನಿರ್ದೇಶಕರು ಜತೆಯಲ್ಲಿದ್ದರು.
ಇದನ್ನೂ ಓದಿ:ಕೋಲಾರವನ್ನೇ ಆಯ್ಕೆ ಮಾಡಿಕೊಳ್ತಿರೋದೇಕೆ ವಿಪಕ್ಷ ನಾಯಕ ಸಿದ್ದರಾಮಯ್ಯ..?