ಬೆಂಗಳೂರು: ಹಾಸ್ಯ ನಟ ಚಿಕ್ಕಣ್ಣಗೆ ಹೀರೋ ಆಗಿ ಬಡ್ತಿ ಸಿಕ್ಕಿದೆ… ಸ್ಯಾಂಡಲ್ವುಡ್ನಲ್ಲಿ ‘ಉಪಾಧ್ಯಕ್ಷ’ರ ಪಟ್ಟಾಭಿಷೇಕಕ್ಕೆ ತಯಾರಿ ನಡೀತಿದೆ.. ಬಹಳ ಅದ್ಧೂರಿಯಾಗಿಯೇ ಸಿನಿಮಾ ತೆರೆಮೇಲೆ ಬರ್ತಿದೆ.. ಅಷ್ಟಕ್ಕೂ ಉಪಾಧ್ಯಕ್ಷ ಸಿನಿಮಾ ಕಥೆಯೇನು..? ಬಹಳ ಹಿಂದೆಯೇ ಘೋಷಣೆಯಾಗಿದ್ದ ಸಿನಿಮಾ ತಡವಾಗಿ ಸೆಟ್ಟೇರಿದ್ದು ಯಾಕೆ..? ಸಿನಿಮಾದಲ್ಲಿ ಯಾರೆಲ್ಲಾ ಕೆಲಸ ಮಾಡ್ತಿದ್ದಾರೆ..? ಹೀರೋ ಆಗ್ತಿರೋ ಬಗ್ಗೆ ಚಿಕ್ಕಣ್ಣ ಏನಂತಾರೆ..? ಈ ಸ್ಟೋರಿ ಓದಿ…
ಚಿತ್ರರಂಗದಲ್ಲಿ ಹಾಸ್ಯ ಕಲಾವಿದರು ಹೀರೋ ಆಗಿ ಅದೃಷ್ಟಪರೀಕ್ಷೆ ಮಾಡಿಕೊಳ್ಳೋದು ಹೊಸದೇನು ಅಲ್ಲ.. ಇದೀಗ ನಟ ಚಿಕ್ಕಣ್ಣ ಕೂಡ ಅದೇ ಹಾದಿಯಲ್ಲಿದ್ದಾರೆ.. ಕನ್ನಡದ ಎಲ್ಲಾ ಸೂಪರ್ ಸ್ಟಾರ್ಗಳ ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ಪ್ರೇಕ್ಷಕರ ಮನಗೆದ್ದಿರುವ ಚಿಕ್ಕಣ್ಣ ಈಗ ಹೀರೋ ಆಗಿ ಇಡೀ ಸಿನಿಮಾ ರಂಜಿಸೋಕೆ ಬರ್ತಿದ್ದಾರೆ.. ಅದು ಕೂಡ ಅಧ್ಯಕ್ಷ ಸಿನಿಮಾ ಸೀಕ್ವೆಲ್ನಲ್ಲಿ ಅನ್ನೋದು ವಿಶೇಷ.
ನಟ ಚಿಕ್ಕಣ್ಣ ಹೀರೋ ಆಗ್ತಾರೆ ಅನ್ನೋದು ಹೊಸ ವಿಷಯ ಏನಲ್ಲ.. ಬಹಳ ಹಿಂದೆಯೇ ಇಂತಾದೊಂದು ಸಿನಿಮಾ ಅನೌನ್ಸ್ ಆಗಿ ಸಾಂಗ್ ರೆಕಾರ್ಡಿಂಗ್ ಕೂಡ ಶುರುವಾಗಿತ್ತು.. ಆದ್ರೆ, ಕೊರೋನಾ ಲಾಕ್ಡೌನ್ ಕಾರಣ ಸಿನಿಮಾ ಸೆಟ್ಟೇರೋದು ತಡವಾಗಿತ್ತು.. ಇಂದು ಕನಕಪುರ ರಸ್ತೆಯ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಚಿತ್ರಕ್ಕೆ ಚಾಲನೆ ಕೊಟ್ಟಿದೆ ಚಿತ್ರತಂಡ.. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಹಳ ಅದ್ಧೂರಿಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ..
ಶರಣ್ ಮತ್ತು ಚಿಕ್ಕಣ್ಣ ನಟನೆಯ ಅಧ್ಯಕ್ಷ ಸಿನಿಮಾ ಸೂಪರ್ ಹಿಟ್ ಆಗಿತ್ತು.. ಚಿತ್ರದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಗಿ ಇವರಿಬ್ಬರ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.. ಅದರಲ್ಲೂ ಚಿಕ್ಕಣ್ಣ ಅವರಿಗೆ ಉಪಾಧ್ಯಕ್ಷ ಪಾತ್ರ ಬಹಳ ಹೆಸರು ತಂದುಕೊಟ್ಟಿತ್ತು.. ಇದೀಗ ಅದೇ ಟೈಟಲ್ನಲ್ಲಿ ಅದೇ ಕಥೆಯನ್ನು ಮುಂದುವರೆಸುವ ಪ್ರಯತ್ನ ನಡೀತಿದೆ.. ದಿಲ್ವಾಲಾ ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ಧಾರೆ.
ಉಪಾಧ್ಯಕ್ಷ ಚಿತ್ರದಲ್ಲಿ ನಾಯಕಿಯಾಗಿ ಕಿರುತೆರೆ ನಟಿ ಮಲೈಕಾ ವಸುಪಾಲ್ ಬಣ್ಣ ಹಚ್ಚಿದ್ದಾರೆ.. ಚಿತ್ರದ ಮುಖ್ಯ ಪಾತ್ರದಲ್ಲಿ ಸಾಧು ಕೋಕಿಲ ಬಣ್ಣ ಹಚ್ಚಿದ್ದು, ಮುಹೂರ್ತ ಸಮಾರಂಭದಲ್ಲಿ ಭಾಗಿ ಆಗಿದ್ರು.. ಇನ್ನುಳಿದಂತೆ ಅಧ್ಯಕ್ಷ ಚಿತ್ರದಲ್ಲಿದ್ದ ರವಿಶಂಕರ್, ವೀಣಾ ಸುಂದರ್ ತಾರಾಗಣದಲ್ಲಿದ್ದಾರೆ.. ಅರ್ಜುನ್ ಜನ್ಯಾ ಮ್ಯೂಸಿಕ್, ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ.. ಮೈಸೂರಿನಲ್ಲೇ ಬಹುತೇಕ ಸಿನಿಮಾ ಚಿತ್ರೀಕರಣ ನಡೆಯಲಿದೆ..
ಡಿಎನ್ ಸಿನಿಮಾಸ್ ಬ್ಯಾನರ್ನಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ ಉಮಾಪತಿ ಶ್ರೀನಿವಾಸ್ ಉಪಾಧ್ಯಕ್ಷ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.. ಟೈಟಲ್ನಿಂದ್ಲೇ ಸಿನಿಮಾ ಗಮನ ಸೆಳೆದಿದ್ದು, ಈ ವರ್ಷಾಂತ್ಯಕ್ಕೆ ಪ್ರೇಕ್ಷಕರು ತೆರೆಮೇಲೆ ಚಿಕ್ಕಣ್ಣನನ್ನು ಹೀರೋ ಆಗಿ ನೋಡ್ಬೋದು.