ಬೆಂಗಳೂರು : ಮಾಜಿ ಉಪಮಹಾಪೌರ ಹರೀಶ್ ಸಿಎಂ ಭಾಷಣದ ಮಧ್ಯೆ ಸಮುದಾಯದ ಪರವಾಗಿ ಬೇಡಿಕೆ ಮನವಿ ಮಾಡಲು ಎದ್ದು ನಿಂತಿದ್ದಕ್ಕೆ ಸಿಎಂ ಬೊಮ್ಮಾಯಿ ಮಾತನಾಡಿ, ಕುತ್ಕೊಳಪ್ಪ ನೀನು, ಆಗೋದನ್ನ ಮಾತ್ರ ಹೇಳ್ತೀನಿ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ನಾನು ಸುಳ್ಳು ಆಶ್ವಾಸನೆ ಕೊಡಲು ಬಂದಿಲ್ಲ, ಹಿಂದಿನವರು ಮಾಡಿರೋದೇ ರೂಡಿಯಾಗಿ ಬಂದಿದೆ. ನಿಮಗೆ ಹಿಂದಿನವರು ಇದ್ದಾಗ ಕೊಡ್ತೀನಿ ಕೊಡ್ತೀನಿ ಅಂತಾರೆ, ಎರಡು ತಿಂಗಳ ನಂತರ ಕೊಡಿಸ್ತೀನಿ ಕೊಡಿಸ್ತೀನಿ ಅಂತಾರೆ, ಇನ್ನೆರಡು ತಿಂಗಳು ಹೋದಾಗ ಕೊಡೋರನ್ನು ತೋರಿಸ್ತೀನಿ ಅಂತ ಸುಮ್ನಾಗ್ತಾರೆ. ನಾವು ಹಾಗಲ್ಲ, ನಾವು ಹೇಳೋದನ್ನು ಮಾಡ್ತೇವೆ, ಕಾಲ ಬಂದಾಗ ನಿಮಗೇ ಸತ್ಯ ಗೊತ್ತಾಗುತ್ತೆ. ಹಿಂದಿನ ಸರ್ಕಾರಗಳು ಕೇವಲ ಆಶ್ವಾಸನೆ ನೀಡಿದೆ, ಜನ ಜಾಗೃತರಾಗಿದ್ದಾರೆ. ಮುಂದೆ ನನ್ನ ಎದುರಿಗೆ ಬಂದಾಗ ನೀವು ಹೇಳಿದ್ದನ್ನೇ ಮಾಡಿದ್ದೀರಾ ಎಂದು ಜನ ಹೇಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ತುಮಕೂರಲ್ಲಿ ನಿಧಿಯ ಆಸೆಗಾಗಿ ಪುರಾತನ ಆಂಜನೇಯ ದೇವಾಲಯದ ಗರ್ಭಗುಡಿಯನ್ನೇ ಅಗೆದ ದುಷ್ಕರ್ಮಿಗಳು…