ಸ್ಯಾಂಡಲ್ವುಡ್ ಮೋಹಕ ತಾರೆ ಹಾಗೂ ರಾಜಕಾರಣಿ ರಮ್ಯಾ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಬೋಲ್ಡ್ ಸೆಲ್ಫೀಗಳನ್ನ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದು, ಇದನ್ನ ನೋಡಿದ ಫ್ಯಾನ್ಸ್ಗಳೆಲ್ಲಾ ಫುಲ್ ಫಿದಾ ಆಗಿದ್ದಾರೆ
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿ ಹೊತ್ತಿದ್ದ ರಮ್ಯಾ ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಎಲ್ಲ ಸೋಷಿಯಲ್ ಮೀಡಿಯಾ ಖಾತೆ ಡಿ ಆಕ್ಟಿವೇಟ್ ಮಾಡಿ ಅಜ್ಞಾತವಾಸಕ್ಕೆ ತೆರಳಿದ್ದರು. ಆದರೆ, ಈಗ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇನ್ಸ್ಟಾಗ್ರಾಂ, ಟ್ವಿಟ್ಟರ್, ಫೇಸ್ಬುಕ್ನಲ್ಲಿ ಸದಾ ಸಕ್ರಿಯರಾಗಿದ್ದಾರೆ ರಮ್ಯಾ ಅದರಲ್ಲೂ ರಮ್ಯಾ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡ ಬೋಲ್ಡ್ ಸೆಲ್ಫೀಗಳನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಇಮ್ಮ ಎಲ್ಲಾ ಸೆಲ್ಫೀಗಳಿಗು ಡಿಫ್ರೆಂಟ್ ಡಿಫ್ರೆಂಟ್ ಎಕ್ಸಪ್ರೇಷನ್ಸ್ ಕೊಟ್ಟಿದ್ದಾರೆ, ಅಲ್ಲದೆ ಈ ಚಿತ್ರಗಳನ್ನ ನೋಡ್ತಿದ್ರೆ ಚಂದನವನದ ಈ ಪದ್ಮಾವಿತಿ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು ನಟಿಸಲು ಮನಸ್ಸು ಮಾಡುತ್ತಿದ್ದಾರಾ ಎಂಬ ಅನುಮಾನ ಸೃಷ್ಟಿಸಿದೆ.
ಸದ್ಯ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಫೋಟೋ ಹಂಚಿಕೊಂಡಿರುವ ರಮ್ಯಾ, ಸಖತ್ ಕ್ರೇಜಿಯಾಗಿ ಫೋಸ್ ಕೊಡಲು ಪ್ರಯತ್ನಿಸಿದರೂ, ನನ್ನ ಬಳಿ ಇರುವ ಸೆಲ್ಫಿಗಳು ಹೀಗೇ ಇವೆ ಅಂತ ಕೂಡ ಹೇಳಿಕೊಂಡಿದ್ದಾರೆ. ವರ್ಷಗಳ ಬಳಿಕ ಸಾಮಾಜಿಕ ಜಾಲತಾಣಕ್ಕೆ ಹಿಂತಿರುಗಿರುವ ರಮ್ಯಾ ಪೋಸ್ಟ್ಗಳನ್ನು ನೋಡಿ ಅಭಿಮಾನಿಗಳಿಗೆ ಆಶ್ಚರ್ಯವಾಗಿದ್ದಾರೆ.