ಮೈಸೂರು : ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ನಾಲ್ವರನ್ನು ಕೊಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ‘ಕೂಂಬಿಂಗ್’ ಚುರುಕುಗೊಳಿಸಿದೆ. ಹೊರಳಹಳ್ಳಿಯಲ್ಲಿ ಬಹು ದೊಡ್ಡ ಬೋನು (ತುಮಕೂರು ಕೇಜ್) ಅಳವಡಿಸಲಾಯ್ತು. ಬಾಲಕನನ್ನು ಕೊಂದಿದ್ದ ಸ್ಥಳದಲ್ಲಿ ಬೋನು ಇರಿಸಲಾಗಿದ್ದು, ಬಂಡೀಪುರ, ನಾಗರಹೊಳೆ ಉದ್ಯಾನದ 120 ಸಿಬ್ಬಂದಿ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದಾರೆ.
ಸೋಸಲೆ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯಪಡೆ ಗಸ್ತಿನಲ್ಲಿದೆ. ‘10 ತಂಡಗಳನ್ನು ರಚಿಸಲಾಗಿದ್ದು, ಹೊರಳವಳ್ಳಿಯಲ್ಲಿ ತುಮಕೂರು ಕೇಜ್ ಹಾಗೂ ವಿವಿಧೆಡೆ 13 ಬೋನು ಇರಿಸಲಾಗಿದೆ. 16 ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗಿದೆ. ರಾತ್ರಿ ಕಾರ್ಯಾಚರಣೆಗೆ ಥರ್ಮಲ್ ಡ್ರೋಣ್‌ಗಳನ್ನು ಬಳಸಲಾಗುತ್ತಿದೆ’ ಎಂದು ಸಿಸಿಎಫ್ ಮಾಲತಿ ಪ್ರಿಯಾ ತಿಳಿಸಿದ್ದಾರೆ. ‘ಎಲಿಫೆಂಟ್ ಟಾಸ್ಕ್‌ಫೋರ್ಸ್ ಸಿಬ್ಬಂದಿಯೂ ಪಾಲ್ಗೊಂಡಿದ್ದು, 2 ದಿನಗಳಿಂದ ಶೋಧ ಕಾರ್ಯಾಚರಣೆ ನಡೆದಿದೆ. ಕಬ್ಬು ಕಟಾವಿಗೆ ಜಿಲ್ಲಾಧಿಕಾರಿ 15 ದಿನಗಳ ಗಡುವು ನೀಡಿದ್ದಾರೆ. ಚಿರತೆ ಬಾಲಕನನ್ನು ಕೊಂದ ಜಾಗ ಪಾಳುಬಿದ್ದ ಪ್ರದೇಶವಾಗಿದ್ದು, 30 ಎಕರೆಯಷ್ಟು ಕಾಡು ಬೆಳೆದಿದೆ. ಇನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಹಾಡಿ ಯುವಕನನ್ನು ಕೊಂದಿದ್ದ ಹುಲಿಯನ್ನು ದಸರಾ ಆನೆ ‘ಅರ್ಜುನ’ನ ನೇತೃತ್ವದಲ್ಲಿ ಶಿಬಿರದ ಆನೆಗಳಿಂದ ಕಾಡಿಗಟ್ಟಲಾಗಿದೆ.
ಇದನ್ನೂ ಓದಿ : ಇಂದಿನಿಂದ ಸಾರಿಗೆ ನೌಕರರ ಪ್ರತಿಭಟನೆ… ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ…