ರಾಯ್ ಪುರ: ಬ್ರಾಹ್ಮಣರನ್ನು ಬಹಿಷ್ಕರಿಸಬೇಕು ಎಂದು ಬ್ರಾಹ್ಮಣ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾರಣ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇಂದಿನಿಂದ 14ದಿನಗಳ ಕಾಲ ರಾಯ್ ಪುರದ ಕೋರ್ಟ್ ಜುಡಿಶಿಯಲ್ ಕಸ್ಟಡಿ ವಿಧಿಸಿದೆ.
ಇದನ್ನೂ ಓದಿ:
ಅನುಮತಿ ಪಡೆಯದೆ ಪಬ್ಲಿಕ್ ಪ್ರೋಗ್ರಾಂ ನಲ್ಲಿ ಭಾಗಿಯಾಗಿದ್ದ ರವಿ ಶಾಸ್ತ್ರಿ, ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐ ಗರಂ
ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್ ಅವರು ಬ್ರಾಹ್ಮಣರು ವಿದೇಶಿಗರು, ಅವರನ್ನು ದೇಶದಿಂದ ಹೊರಗೆ ಕಳುಹಿಸಬೇಕು, ಅವರು ಗ್ರಾಮವನ್ನು ಪ್ರವೇಶಿಸದಂತೆ ತಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ನಂದ ಕುಮಾರ್ ಬಘೇಲ್ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.
ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್ ಪ್ರಕರಣ… ಐವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ತಂದೆ ನೀಡಿದ ಹೇಳಿಕೆ ಕುರಿತು ಛತ್ತೀಸ್ ಗಢದ ಸಿಎಂ ಭೂಪೇಶ್ ಬಘೇಲ್ ‘ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಆ ವ್ಯಕ್ತಿ 86 ವರ್ಷ ವಯಸ್ಸಿನ ನನ್ನ ತಂದೆಯೇ ಇರಬಹುದು. ಛತ್ತೀಸಗಡ ಸರ್ಕಾರವು ಪ್ರತಿ ಧರ್ಮ, ವರ್ಗ, ಸಮುದಾಯ ಮತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ. ನನ್ನ ತಂದೆ ನಂದ ಕುಮಾರ್ ಬಾಘೇಲ್ ಅವರು ನಿರ್ದಿಷ್ಟ ಸಮುದಾಯದ ಕುರಿತು ಮಾಡಿರುವ ಹೇಳಿಕೆಯು ಕೋಮು ಶಾಂತಿಯನ್ನು ಕದಡಿದೆ ಎಂದು ಹೇಳಿದ್ರು.
ಸರ್ವ ಬ್ರಾಹ್ಮಣ ಸಮಾಜ ಸಂಸ್ಥೆಯು ಡಿಡಿ ನಗರ ಪೊಲೀಸರಿಗೆ ನೀಡಿದ ದೂರಿನ ಅನ್ವಯ, ನಂದ ಕುಮಾರ್ ಬಾಘೇಲ್ ವಿರುದ್ಧ ಶನಿವಾರ ತಡರಾತ್ರಿ, ಐಪಿಸಿ ಸೆಕ್ಷನ್ 153ಎ (ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚೋದಿಸುವುದು) ಮತ್ತು 505 (1) (ಬಿ) (ಭಯ ಮೂಡಿಸುವ ಉದ್ದೇಶದ ಕೃತ್ಯ) ಅಡಿ ಎಫ್‌ಐಆರ್ ದಾಖಲಿಸಿದ್ರು. ಈಗ ಮುಖ್ಯಮಂತ್ರಿಯ ತಂದೆಯನ್ನೇ ಬಂಧನ ಮಾಡಲಾಗಿದೆ. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.