ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದ್ದು, ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯಲಿದ್ದಾರೆ, ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ವಿಚಾರ ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ಬಿಎಸ್ವೈ ಪರ ಮಠಾಧೀಶರು, ರಾಜಕೀಯ ನಾಯಕರು ಹೇಳಿಕೆ ನೀಡುತ್ತಿದ್ದು, ಪ್ರತಿಭಟನೆಗೆ ಕೂಡ ಮುಂದಾಗಿದ್ದಾರೆ. ಆದರೆ ಯಡಿಯೂರಪ್ಪ ನವರು ಸಿಎಂ ಪಟ್ಟ ಬಿಡಲು ಮಾನಸಿಕವಾಗಿ ಸಿದ್ಧರಾದಂತಿದೆ. ಮುಂದಿನ ಸಿಎಂ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ಗೆ ಮೂರು ಸಚಿವರ ಹೆಸರು ಸೂಚಿಸಿದ್ದಾರೆ.
ಟ್ರೈನ್ನಲ್ಲಿ ಅಸಭ್ಯ ವರ್ತನೆ ಮಾಡೋದು, ವಸ್ತುಗಳನ್ನ ಕದಿಯೋದು ಮಾಡಿದ್ರೆ ಡೈರೆಕ್ಟ್ ಅಂದರ್..
ರಾಜ್ಯದ ಉದ್ದಗಲದಿಂದಲೂ ವಿವಿಧ ಮಠಾಧೀಶರು ಯಡಿಯೂರಪ್ಪ ಪದಚ್ಯುತಿಗೊಳಿಸಿದ್ರೆ ಸಮುದಾಯ ಸುಮ್ಮನೆ ಕೂರಲ್ಲ ಅನ್ನೋ ಸಂದೇಶವನ್ನ ಕಮಲ ಕಮ್ಯಾಂಡ್ಗೆ ರವಾನಿಸಿದ್ದಾರೆ. ರಾಜಕೀಯವಾಗಿ ಮಾತ್ರವಲ್ಲ, ವಿವಿಧ ಧರ್ಮಗಳ ಮಠಾಧೀಶರು ಕೂಡ ಬಿಎಸ್ ಯಡಿಯೂರಪ್ಪ ಪರ ದನಿ ಎತ್ತಿದ್ದಾರೆ. ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕಕ್ಕೆ ತಂದ ಧೀಮಂತ ನಾಯಕ ಬಿಎಸ್ ಯಡಿಯೂರಪ್ಪರನ್ನ ಬದಲಿಸಿದ್ರೆ ಬಿಜೆಪಿಗೆ ದೊಡ್ಡ ಮಟ್ಟದ ಹಾನಿ ಖಂಡಿತ ಎಂದು ವಿವಿಧ ಮಠಾಧೀಶರು ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೇ ವಿರೋಧ ಪಕ್ಷದ ಕೆಲ ನಾಯಕರು ಸಹ ಯಡಿಯೂರಪ್ಪನವರೆ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ. ಮುಂದಿನ ಸಿಎಂ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಗೆ ಮೂರು ಸಚಿವರ ಹೆಸರು ಸೂಚಿಸಿದ್ದಾರೆ. ಸಿಎಂ ಪಟ್ಟ ಬಿಡಲು ಮಾನಸಿಕವಾಗಿ ಯಡಿಯೂರಪ್ಪ ಸಿದ್ಧಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ಇದನ್ನೂ ಓದಿ: ಡಿವೋರ್ಸ್ ಆಗಿದ್ದ ರಾಜ್ಕುಂದ್ರಾನ ಮದುವೆಯಾಗಿ ಶಿಲ್ಪಾ ಶೆಟ್ಟಿನೇ ತಪ್ಪು ಮಾಡಿಬಿಟ್ರಾ..!
ಬಿಜೆಪಿ ಹೈಕಮಾಂಡ್ ಗೆ ಗೃಹಸಚಿವ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಪ್ರಹ್ಲಾದ್ ಜೋಶಿ ಈ ಮೂವರಲ್ಲಿ ಯಾರಾದರೂ ಮುಂದಿನ ಸಿಎಂ ಆಗಲಿ ಎಂದು ಸೂಚಿಸಿದ್ದಾರೆ. ಸದಾ ತಮ್ಮ ಜೊತೆಗೇ ಇರೋ ಬಸವರಾಜ ಬೊಮ್ಮಾಯಿ ಪರ ಒಲವು ಒಂದು ಕಡೆಯಾದರೆ ಲಿಂಗಾಯತರ ಬೆಂಬಲ ಸಿಗುತ್ತದೆ. ಸಿಎಂ ಸ್ಥಾನ ಲಿಂಗಾಯತರಿಗೆ ಕೊಡೊದಾದರೆ ಬೊಮ್ಮಾಯಿಗೆ ಕೊಡಿ ಎಂದಿದ್ದಾರೆ. ಇನ್ನು ಒಕ್ಕಲಿಗರಿಗೆ ಕೊಡೋದಾದ್ರೆ ತಮ್ಮ ಕ್ಯಾಂಪ್ನ ಆರ್. ಅಶೋಕ್ಗೆ ಕೊಡಿ. ಕಾಂಪ್ರಮೈಸ್ ಕ್ಯಾಂಡಿಡೇಟ್ ಆಗಿ ಪ್ರಹ್ಲಾದ್ ಜೋಶಿಯಾದ್ರೂ ಪರವಾಗಿಲ್ಲ, ಈ ಮೂವರ ಹೊರತು ಪಡಿಸಿ ಬೇರೆ ಯಾರೂ ಮುಖ್ಯಮಂತ್ರಿಯಾಗೋದು ಬೇಡ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.