ಬೆಂಗಳೂರು : ಇದು ರಾಜ್ಯ ರಾಜಕೀಯದ ಸ್ಫೋಟಕ ಸುದ್ದಿಯಾಗಿದ್ದು, ಕೇಶವ ಕೃಪದಲ್ಲಿ ಸಿಎಂ ಬೊಮ್ಮಾಯಿ ಮಹತ್ವದ ಮೀಟಿಂಗ್ ನಡೆಸಿದ್ದಾರೆ.
ಕಳೆದ ರಾತ್ರಿ RSS ನಾಯಕರೊಂದಿಗೆ ಸಿಎಂ ಸಭೆ ನಡೆಸಿದ್ದು, ಮೊದಲ ಬಾರಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಹೊರಗಿಟ್ಟು RSS ನಾಯಕರು ಸಭೆ ನಡೆಸಿದ್ದಾರೆ.ಈ ಹಿಂದೆ ಏನೇ ಡೆವಲಪ್ಮೆಂಟ್ ಇದ್ರೂ BSY ಅವ್ರೇ ಬೇಕಿತ್ತು, B.S ಯಡಿಯೂರಪ್ಪ ಇಲ್ಲದೇ ಮೀಟಿಂಗ್ ನಡೆಸುತ್ತಿರಲಿಲ್ಲ. ಯಾವುದೇ ಮೀಟಿಂಗ್ ಇದ್ರೂ ಯಡಿಯೂರಪ್ಪ ಬೇಕಿತ್ತು , ಆದ್ರೆ ಕಳೆದ ರಾತ್ರಿ BSYರನ್ನ ಹೊರಗೆ ಕಳಿಸಿ ಸಭೆ ನಡೆಸಿದ್ದಾರೆ.RSS ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಎಸ್ವೈಗೆ ಜಾಗವಿರಲಿಲ್ಲ. ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಅಂತಿಮ ಕುರಿತು ನಡೆದ ಚರ್ಚೆ ಇದಾಗಿದೆ. ನಾಯಕರು BJP ಕಚೇರಿಯಲ್ಲಿ ಒಂದು ರೌಂಡ್ ಮೀಟಿಂಗ್ ನಡೆಸಿದ್ದು, ಬಳಿಕ RSS ಕಚೇರಿಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆರ್ಎಸ್ಎಸ್ ನಾಯಕರು 3 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದಾರೆ. ಬಿಎಸ್ವೈನ ಹೊರಗಿಟ್ಟು ಚರ್ಚೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಂಡ್ರೋ ಸೈಮಂಡ್ಸ್ ನಿಧನ…!