ಬೆಂಗಳೂರು: ಸಿಎಂ ದೆಹಲಿ ಭೇಟಿ ಫಿಕ್ಸ್ ಆಗ್ತಿದ್ದಂತೆ ಲಾಬಿ ಜೋರಾಗಿದೆ. ಸಿಎಂ ನಿವಾಸಕ್ಕೆ ಸಾಲು-ಸಾಲು ಶಾಸಕರು ಬರುತ್ತಿದ್ದು, ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ MLA, MLCಗಳು ಬಂದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಭೇಟಿಯಾಗಿದ್ದು, ಬಳ್ಳಾರಿಯ ಸೋಮಶೇಖರರೆಡ್ಡಿ, ಉಡುಪಿಯ ರಘುಪತಿ ಭಟ್
ಅಥಣಿಯ ಮಹೇಶ್ ಕುಮಟಳ್ಳಿ, ಹರತಾಳು ಹಾಲಪ್ಪ, MLC ಹೆಚ್.ವಿಶ್ವನಾಥ್ ಸೇರಿ ಹಲವು ಮುಖಂಡರು ಭೇಟಿಯಾಗಿದ್ದಾರೆ. ದೆಹಲಿ ಭೇಟಿ ವೇಳೆ ವರಿಷ್ಠರ ಜತೆ ಸಂಪುಟ ವಿಸ್ತರಣೆ ಚರ್ಚೆಗೆ ಮನವಿ ಮಾಡಿದ್ದು, ಸಂಪುಟ ವಿಸ್ತರಣೆ ವೇಳೆ ಪರಿಗಣಿಸುವಂತೆ ಶಾಸಕರು ಮನವಿ ಮಾಡುತ್ತಿದ್ದಾರೆ. ಫೆಬ್ರವರಿ 25ರಂದು ದೆಹಲಿಗೆ ಸಿಎಂ ಬೊಮ್ಮಾಯಿ ತೆರಳಲಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದ ಎರಡು ಠಾಣಾ ವ್ಯಾಪ್ತಿಯಲ್ಲಿ ಕ್ರೈಂ ಹೆಚ್ಚಳ..! ತನಿಖೆ ನಡೆಸಲು DG-IGPಗೆ ಗೃಹ ಸಚಿವರ ಪತ್ರ..