ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರ ದಾವೋಸ್ ಪ್ರವಾಸ ಕೊನೆಗೂ ಫಿಕ್ಸ್ ಆಗಿದ್ದು, ಮೇ 22ರ ಬೆಳಗ್ಗೆ ಸಿಎಂ ಹೊರಡಿಲಿದ್ದಾರೆ. ವಿಶ್ವ ಆರ್ಥಿಕ ಹೂಡಿಕೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸಿಎಂ ಬೊಮ್ಮಾಯಿ 4 ದಿನ ದಾವೋಸ್ ಪ್ರವಾಸ ಕೈಗೊಂಡಿದ್ದಾರೆ. ಮೇ 26ರ ಬೆಳಗ್ಗೆ ರಾಜ್ಯಕ್ಕೆ ವಾಪಸಾಗಲಿದ್ದಾರೆ.
ಸಿಎಂ ದಾವೋಸ್ ಭೇಟಿಗೂ ಮುನ್ನ ರಾಜ್ಯ ಪ್ರವಾಸ ಮಾಡಲಿದ್ದಾರೆ. ಇಂದು ಬೆಳಗ್ಗೆ ಧಾರವಾಡಕ್ಕೆ ಪ್ರಯಾಣಿಸಲಿದ್ದಾರೆ. 10 ಗಂಟೆಗೆ KIALನಿಂದ ಧಾರವಾಡಕ್ಕೆ ತರಳಿಲಿದ್ದು, ನಾಳೆ ಮಂಡ್ಯ, ತುಮಕೂರು ಪ್ರವಾಸ ಮಾಡಲಿದ್ದಾರೆ. ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ : ನಾಳೆ ಎಲ್ಲೆಡೆ ಬುದ್ಧ ಪೂರ್ಣಿಮಾ ಆಚರಣೆ..! ಮಾಂಸ ಮಾರಾಟ ಸಂಪೂರ್ಣ ನಿಷೇಧಿಸಿದ ಬಿಬಿಎಂಪಿ..!