ಬೆಂಗಳೂರು: ಸಿದ್ದು ಹಾದಿಯಲ್ಲೇ ಸಿಎಂ ಕ್ಷೇತ್ರ ಹುಡುಕಾಟ, ಎರಡು ಕ್ಷೇತ್ರಗಳ ಮೇಲೆ ಸಿಎಂ ಬೊಮ್ಮಾಯಿ ಕಣ್ಣಿಟ್ಟಿದ್ದು,
ಮೂಲಗಳ ಪ್ರಕಾರ ಎರಡು ಕ್ಷೇತ್ರದಿಂದ ಸಿಎಂ ಸ್ಪರ್ಧೆ ಸಾಧ್ಯತೆಗಳಿದೆ.
ಲಿಂಗಾಯತರೇ ಹೆಚ್ಚಿರುವ ದಾವಣಗೆರೆ ಉತ್ತರದ ಮೇಲೆ ಕಣ್ಣಿಡಲಾಗಿದ್ದು, ಶಿಗ್ಗಾವಿ ಜತೆಗೆ ದಾವಣಗೆರೆ ಉತ್ತರದಿಂದ ಸ್ಪರ್ಧಿಸಲು ಚಿಂತನೆಲ್ಲಿದ್ದಾರೆ ಸಿಎಂ. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಗೆಲ್ಲುವ ಕುದುರೆಯಾಗಿದ್ದರೂ ಬಿಜೆಪಿ ಒಳಬೇಗುದಿ ಹಿನ್ನೆಲೆಯಲ್ಲಿ ಎರಡು ಕ್ಷೇತ್ರ ಆಯ್ಕೆ ಮಾಡುವ ಸಾಧ್ಯತೆಗಳಿದೆ. ಲಿಂಗಾಯತರೇ ಹೆಚ್ಚಿರುವ ದಾವಣಗೆರೆ ಸುತ್ತ ಲಾಭ ಆಗುವ ಲೆಕ್ಕಾಚಾರವಿದ್ದು, ಸಾದರು, ಪಂಚಮಸಾಲಿ ಲಿಂಗಾಯತ ಮತದಾರರೇ ಇಲ್ಲಿ ಹೆಚ್ಚಾಗಿದ್ದು, ಸಾದರು, ಪಂಚಮಸಾಲಿಗಳು ತಮ್ಮ ಸಮಾಜದ ಪರ ನಿಲ್ತಾರೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಸಿಎಂ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಹಾಲಿ ಬಿಜೆಪಿ ಶಾಸಕ ರಾಜಕೀಯ ನಿವೃತ್ತಿ ಘೋಷಿಸಿದ್ದು, ಎಸ್.ರವೀಂದ್ರನಾಥ್ ನಿವೃತ್ತಿ ಹಿನ್ನೆಲೆಯಲ್ಲಿ ಬೊಮ್ಮಾಯಿ ಕಣ್ಣು.