ಬೆಂಗಳೂರು: ಎಲ್ಲೆಲ್ಲಿ ಕಿತ್ತೂರು ರಾಣಿ ಪ್ರತಿಮೆಗಳಿವೆಯೋ ಅಲ್ಲೆಲ್ಲ ರಾಯಣ್ಣ ಪ್ರತಿಮೆಗಳನ್ನು ನಿರ್ಮಿಸ್ತೇವೆ , ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ದೆಹಲಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗವುದು,ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಬರೆಯುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಿತ್ತೂರು ರಾಣಿ ಚೆನ್ನಮನ ಮೂರ್ತಿ ದೆಹಲಿಯಲ್ಲಿದೆ, ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ದೆಹಲಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಬರೆಯುತ್ತೇನೆ, ಸೂಕ್ತ ಸ್ಥಳ ಹುಡುಕಿ ರಾಯಣ್ಣ ಪ್ರತಿಮೆ ದೆಹಲಿಯಲ್ಲಿ ಸ್ಥಾಪಿಸುತ್ತೇವೆ, ಎಲ್ಲೆಲ್ಲಿ ಕಿತ್ತೂರು ರಾಣಿ ಪ್ರತಿಮೆಗಳಿವೆಯೋ ಅಲ್ಲೆಲ್ಲ ರಾಯಣ್ಣ ಪ್ರತಿಮೆಗಳನ್ನು ನಿರ್ಮಿಸುತ್ತೇವೆ, ಎಲ್ಲ ಶಾಲಾ ಕಾಲೇಜುಗಳಲ್ಲೂ ರಾಯಣ್ಣನ ಭಾವಚಿತ್ರ ಹಾಕಲು ಆದೇಶಿಸಲಾಗುತ್ತದೆ. ಇವತ್ತೇ ಈ ಆದೇಶ ಮಾಡ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಅಪ್ಪು ಅಭಿಮಾನಿಗಳಿಗೆ ಗಣರಾಜ್ಯೋತ್ಸವಕ್ಕೆ ಭರ್ಜರಿ ಗಿಫ್ಟ್ …! ಜೇಮ್ಸ್ ಪೋಸ್ಟರ್ ರಿಲೀಸ್..!