ಸಿಎಂ ಬೊಮ್ಮಾಯಿ ತಮಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಸಿಗ್ನಲ್ ಫ್ರೀ ಸಾಕೆಂದು ಸೂಚನೆ ಕೊಟ್ಟಿದ್ದರು. ಅದೇ ರೀತಿ ಬೊಮ್ಮಾಯಿ ಝೀರೋ ಟ್ರಾಫಿಕ್ ಇಲ್ಲದೇ ಓಡಾಡುತ್ತಿರುವ ಹಿನ್ನೆಲೆ, ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿದೆ. ಸಿಎಂ ಎಲ್ಲಿಗೆ ಹೋಗ್ತಾರೆ, ಹೇಗೆ ಭದ್ರತೆ ಮಾಡೋದು ಎಂಬುವುದೇ ಪೊಲೀಸರಿಗೆ ಟೆನ್ಶನ್ ಆಗಿದೆ.
ಎಲ್ಲಾ ಕಡೆಯೂ ಓಡಾಡುವ ಸಿಂಪಲ್ ಸಿಎಂ ಬೊಮ್ಮಾಯಿ, ಆರ್ ಟಿ ನಗರ ನಿವಾಸ, ಗೃಹ ಕಚೇರಿ ಕೃಷ್ಣಾ, ಕೆ ಕೆ ಗೆಸ್ಟ್ ಹೌಸ್, ವಿಧಾನಸೌಧ ಸೇರಿದಂತೆ ಹಲವು ಕಡೆ ಓಡಾಟ ನಡೆಸುತ್ತಿರುತ್ತಾರೆ. ತಾವು ಎಲ್ಲೆಲ್ಲಿ ಹೋಗುತ್ತಾರೆ ಎಂಬುದರ ಬಗ್ಗೆ ಮೊದಲೇ ಭದ್ರತಾ ಸಿಬ್ಬಂದಿಗೆ ಸಿಎಂ ತಿಳಿಸದೆ, ಕಾರು ಹತ್ತಿದ ಮೇಲೆ ಎಲ್ಲಿಗೆ ಹೋಗಬೇಕೆಂದು ತಿಳಿಸುತ್ತಾರಂತೆ. ಹೀಗಾಗಿ ಸಿಎಂ ತಕ್ಷಣ ಕೊಡುವ ಮಾಹಿತಿ ಯಿಂದ ಭದ್ರತೆ ನೀಡಲು ಪೊಲೀಸರ ಪರದಾಡುವಂತಾಗಿದೆ. ರಸ್ತೆ ಟ್ರಾಫಿಕ್ ಕ್ಲಿಯರ್ ಸೇರಿದಂತೆ ಸಿಎಂಗೆ ಭದ್ರತೆ ಕೊಡಲು ಪೊಲೀಸರು ಹರಸಾಹಸ ಪಡುತ್ತಿದ್ದು, ಸಾಮಾನ್ಯರಂತೆ ಸಿಎಂ ಓಡಾಡುವಾಗ ಭದ್ರತೆ ಅಡ್ಡಿ ಆತಂಕ ಎದುರಾಗುತ್ತದೆ.
ಇದರಿಂದ ವಾಹನಗಳ ಕ್ಲಿಯರ್ ಮಾಡಿ, ಸಿಎಂ ಭದ್ರತೆ ನೀಡಿ ಕಳುಹಿಸೋದೆ ದೊಡ್ಡ ಸವಾಲಾಗಿದ್ದು, ನಿತ್ಯ ಇದೇ ಸವಾಲನ್ನು ಪೊಲೀಸರು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಸಿಎಂ ಜೊತೆಯಲ್ಲಿರುವ ಭದ್ರತಾ ಸಿಬ್ಬಂದಿಗೂ ಇದೇ ಆತಂಕವಿದ್ದು, ಸಿಎಂ ಯಾವಾಗ ಎಲ್ಲಿ ಹೋಗುತ್ತಾರೋ ಎಂದು ಅವರ ಜೊತೆಯಲ್ಲೇ ಸಿಬ್ಬಂದಿ ಇರುತ್ತಾರೆ. ಮಧ್ಯಾಹ್ನ ಊಟಕ್ಕೂ ತಮ್ಮ ನಿವಾಸ ಆರ್ ಟಿ ನಗರಕ್ಕೆ ಸಿಎಂ ಹೋಗುತ್ತಿದ್ದು, ಹಲವು ಬಾರಿ ಸಿಎಂ ಓಡಾಟದಿಂದ ಪೊಲೀಸರಿಗೆ ಟೆನ್ಸನ್ ಜೊತೆಗೆ ಸಾರ್ವಜನಿಕರಿಗೂ ಕಿರಿಕಿರಿಯಾಗುತ್ತಿದೆ.
ಇದನ್ನೂ ಓದಿ:#Flashnews ಬೆಂಗಳೂರಿನಲ್ಲಿ ಸೆಲೆಬ್ರಿಟಿ ಮನೆಗಳ ಮೇಲೆ ಪೊಲೀಸ್ ದಾಳಿ.. ಪತ್ತೆಯಾಗಿರುವ ಡ್ರಗ್ಸ್ ಎಷ್ಟು ಗೊತ್ತಾ.. ?