ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಸಿಟಿ ರೌಂಡ್ಸ್ ಸ್ಟಾರ್ಟ್ ಆಗಿದ್ದು, ಸಿಎಂ ಮಳೆಯಲ್ಲೇ ಸಂಪೂರ್ಣ ಬೆಂಗಳೂರು ಪ್ರದಕ್ಷಿಣೆಗೆ ಮುಂದಾಗಿದ್ದಾರೆ.
ಸಿಎಂ ಬೊಮ್ಮಾಯಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ. ಮೋಹನ್ , ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ , ಪೊಲೀಸ್ ಕಮಿಷನರ್ ಸಿ.ಹೆಚ್.ಪ್ರತಾಪ್ ರೆಡ್ಡಿ ಬಿಬಿಎಂಪಿ, BWSSB ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಜೆಸಿ ನಗರ 60 ಅಡಿ ರಸ್ತೆಗೆ ಭೇಟಿ ನೀಡಲಿದ್ದು, ಜಿಟಿ-ಜಿಟಿ ಮಳೆ ನಡುವೆಯೂ ಹಾನಿ ಪರಿಶೀಲನೆ ನಡೆಸುತ್ತಿದ್ದಾರೆ. ನಂತರ ಕಮಲನಾಗರದ ಶಂಕರಮಠ ಬಳಿ ಪರಿಶೀಲನೆ , ಕಾಲುವೆಗಳ ಹೂಳು ತೆಗೆದಿರುವುದನ್ನು ವೀಕ್ಷಿಸಲಿದ್ದಾರೆ.
ಇದನ್ನೂ ಓದಿ : BJP ಮುಖಂಡ ಅನಂತರಾಜು ಸೂಸೈಡ್ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್..! ನಿನ್ನೆ ಒಂದು..ಇಂದು ಮತ್ತೊಂದು ಆಡಿಯೋ ವೈರಲ್..!