ದೆಹಲಿ: ಎಲೆಕ್ಷನ್ ವರ್ಷದಲ್ಲಿ ಸಿಗುತ್ತಾ ಸಂಪುಟ ವಿಸ್ತರಣೆ ಹರ್ಷ..?ಖಾಲಿ ಸ್ಥಾನಗಳ ಭರ್ತಿಗೆ ಬಿಜೆಪಿ ವರಿಷ್ಠರು ಓಕೆ ಅಂತಾರಾ..? ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಸಿಎಂ ದೆಹಲಿ ಭೇಟಿ ನೀಡಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಇಂದು ದೆಹಲಿಗೆ ತೆರಳಲಿದ್ದಾರೆ.
ಎರಡು ದಿನ ದೆಹಲಿಯಲ್ಲೇ ವಾಸ್ತವ್ಯ ಹೂಡುವ ಸಿಎಂ ಬೊಮ್ಮಾಯಿ,ಅಮಿತ್ ಶಾ, ಜೆ.ಪಿ.ನಡ್ಡಾ ಜತೆ ಸಿಎಂ ಚರ್ಚೆ ಸಾಧ್ಯತೆಗಳಿದೆ. ಖಾಲಿ ಇರುವ ಸಂಪುಟ ಸ್ಥಾನಗಳ ಭರ್ತಿ ಪ್ರಸ್ತಾಪಿಸುವ ಸಾಧ್ಯತೆಗಳಿದ್ದು, ಖಾಲಿ ಸ್ಥಾನಗಳ ಭರ್ತಿಗೆ ವರಿಷ್ಠರು ಓಕೆ ಅಂತಾರೋ..? ಸಂಪುಟ ವಿಸ್ತರಣೆ ಜತೆಗೆ ಖಾತೆ ಬದಲಾವಣೆಗೂ ಸೂಚಿಸುತ್ತಾರೋ..? ಕಾದು ನೋಡಬೇಕಾಗಿದೆ. ಎರಡು ದಿನ ದೆಹಲಿಯಲ್ಲಿ ಹಲವು ಮಾತುಕತೆ ನಡೆಸುವ ಸಿಎಂ, ಇಂದು ಸಂಜೆ 4.30ಕ್ಕೆ ಅಜಾದಿ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಭಾನುವಾರ ಸಂಜೆ ನೀತಿ ಆಯೋಗ ಸಭೆಯಲ್ಲಿ ಪಾಲ್ಗೊಳ್ಳುವ ಸಿಎಂ, ಭಾನುವಾರ ರಾತ್ರಿ 11.30ಕ್ಕೆ ದೆಹಲಿಯಿಂದ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ ದಿನವನ್ನೇ ಕಾಂಗ್ರೆಸ್ ಪ್ರತಿಭಟನೆಗೆ ಆಯ್ದುಕೊಂಡಿದೆ… ಅಮಿತ್ ಶಾ…