ಬೆಂಗಳೂರು : ಸಂಪುಟದ ನಿರ್ಧಾರ ವರಿಷ್ಠರೇ ತೀರ್ಮಾನ ಮಾಡುತ್ತಾರೆ, ಪುನರ್ ರಚನೆ, ವಿಸ್ತರಣೆ ಎಲ್ಲಾ ಅವರಿಗೇ ಬಿಟ್ಟದ್ದು, ಸದ್ಯ ನಾಲ್ಕು ಸ್ಥಾನಗಳು ಖಾಲಿ ಇವೆ. ಖಾಲಿ ಸ್ಥಾನ ಭರ್ತಿ ಯಾವಾಗ ಅಂತಾ ವರಿಷ್ಠರೇ ಹೇಳುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ , ವರಿಷ್ಠರ ಜೊತೆ ಚರ್ಚಿಸಿ ಸಂಪುಟದ ಬಗ್ಗೆ ತೀರ್ಮಾನಿಸುವೆ, ವರಿಷ್ಠರು ಕರೆದಾಗ ನಾನು ದೆಹಲಿಗೆ ಹೋಗುತ್ತೇನೆ. ಎಲ್ಲರಿಗೂ ಸಚಿವರಾಗೋ ಹಂಬಲ ಇದ್ದೇ ಇರುತ್ತದೆ, ಸಚಿವಾಕಾಂಕ್ಷಿಗಳು ಎಲ್ಲಾ ಪಕ್ಷದಲ್ಲೂ ಇರುತ್ತಾರೆ. ಕೆಲ ನಾಯಕರು ಒಟ್ಟಿಗೆ ಸೇರಿದ ತಕ್ಷಣ ಪ್ರತ್ಯೇಕ ಸಭೆ ಅಲ್ಲ, ಬೆಳಗಾವಿ ಸಭೆಗೆ ಯಾವುದೇ ಮಹತ್ವ ಬೇಡ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.