ಬೆಂಗಳೂರು: ಜನಸಾಮಾನ್ಯರ ತೊಂದರೆ ದೂರು ಮಾಡುವುದು ನಿಮ್ಮ ಕೆಲಸ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿಗಳು ‘ಎಲ್ಲರೂ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಕೇವಲ 5-10 ಕೆಲಸಗಳಿಗೆ ಮಾತ್ರ ನೀವು ಸೀಮಿತರಾಗಬಾರದು. ಜಿಲ್ಲೆವಾರು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ. ಜನರು ಜಾಗೃತರಾಗಿದ್ದಾರೆ, ಕಾಲ ಬದಲಾಗಿದೆ, ಜನರು ನಮ್ಮನ್ನು ಪ್ರಶ್ನೆ ಮಾಡುವ ಹಂತಕ್ಕೆ ತಂದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.
ಇದನ್ನೂ ಓದಿ: PSI ಅಕ್ರಮದಲ್ಲಿರುವವರ ಬೇಟೆಯಾಡ್ತಿರುವ CID..! PSI ಎಕ್ಸಾಂನಲ್ಲಿ ಹಣ ಕೊಟ್ಟು ಪಾಸಾದವರಿಗಾಗಿ ಶೋಧ..!
ಇನ್ನು ಬಜೆಟ್ ಅನುಷ್ಠಾನದ ಬಗ್ಗೆ ಹೆಚ್ಚಿನ ಒತ್ತು ನೀಡಿ, ಬಾಕಿ ಇರುವ ಕೆಲಸಗಳನ್ನು ಅದಷ್ಟು ಬೇಗ ಮುಗಿಸಿ. ಜಿಲ್ಲೆಗಳ ಎಲ್ಲಾ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ಆಗ ಫೈಲ್ ಗಳು ಬೇಗ ಕ್ಲಿಯರ್ ಆಗತ್ತವೆ. ಜನಸಾಮಾನ್ಯರ ತೊಂದರೆ ದೂರ ಮಾಡುವುದು ನಿಮ್ಮ ಕೆಲಸ. ಇದನ್ನು ಮಾಡಿಲ್ಲ ಅಂದ್ರೆ ನೀವು ಯಾಕೆ ಬೇಕು ಎಂದು ಸಭೆಯಲ್ಲಿ ಡಿಸಿಗಳಿಗೆ ಸಿಎಂ ಬೊಮ್ಮಾಯಿ ವಾರ್ನಿಂಗ್ ನೀಡಿದ್ದಾರೆ.