ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಕಲಚೇತನ ಯುವಕನ ಮನವಿಗೆ ಸ್ಪಂದಿಸಿದ್ದು, ಯುವಕನಿಗೆ ಎಲೆಕ್ಟ್ರಿಕ್ ವೆಹಿಕಲ್ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆ, ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್… ಕೇಂದ್ರ ಚುನಾವಣಾ ಸಮಿತಿಗೆ ಶೀಘ್ರವೇ ಪಟ್ಟಿ ರವಾನೆ…
ಇಂದು ಬಿಜೆಪಿ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಕೊಪ್ಪಳದ ವಿಕಲಚೇತನ ಯುವಕ ಶಿವಪ್ಪ ತಂದೆ ಲಾಲಪ್ಪ ಮನವಿಗೆ ಸಿಎಂ ತಕ್ಷಣ ಸ್ಪಂದಿಸಿದ್ದಾರೆ. ಯುವಕ ತನಗೆ ಎಲೆಕ್ಟ್ರಿಕ್ ವೆಹಿಕಲ್ ಕೊಡಿಸುವಂತೆ ಮನವಿ ಮಾಡಿದೆ. ಆತನ ಬೇಡಿಕೆಗೆ ಸ್ಪಂದಿಸಿದ ಬೊಮ್ಮಾಯಿ ಅವರು ತಮ್ಮ ಆಪ್ತ ಸಹಾಯಕನಿಗೆ ಕರೆ ಮಾಡಿ ಯುವಕನಿಗೆ ಎಲೆಕ್ಟ್ರಿಕ್ ವೆಹಿಕಲ್ ಕೊಡಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ತಿಳಿಸಿದ್ದಾರೆ.