ಕಲಬುರಗಿ: ಪಿಎಸ್ ಐ ಪರೀಕ್ಷೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದಿವ್ಯಾ ಹಾಗರಗಿ ಮನೆ ಮತ್ತು ಜ್ಞಾನಜ್ಯೋತಿ ಶಾಲೆಯಲ್ಲಿ ಇಂದು ಸ್ಥಳ ಮಹಜರು ಮಾಡಲಾಯಿತು.
ಕಲಬುರಗಿಯ PNT ಕಾಲೋನಿಯಲ್ಲಿರುವ ದಿವ್ಯಾ ಹಾಗರಗಿ ಮನೆಯಲ್ಲಿ ಮೊದಲಿಗೆ ಸ್ಥಳ ಮಹಜರು ಮಾಡಲಾಯಿತು. ಬಳಿಕ ಸಿಐಡಿ ಅಧಿಕಾರಿಗಳು ಪಿಎಸ್ ಐ ಪರೀಕ್ಷಾ ಕೇಂದ್ರವಾಗಿದ್ದ ಜ್ಞಾನಜ್ಯೋತಿ ಶಾಲೆಯಲ್ಲಿ ಸ್ಥಳ ಮಹಜರು ಮಾಡಿದ್ದು, ಶಾಲೆಯಲ್ಲಿದ್ದ ಕಂಪ್ಯೂಟರ್, ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: PSI ಅಕ್ರಮ ಕಿಂಗ್ಪಿನ್ R.D ಪಾಟೀಲ್ಗೆ ನ್ಯಾಯಾಂಗ ಬಂಧನ..!
ದಿವ್ಯಾ ಹಾಗರಗಿ ಜೊತೆಯಲ್ಲೇ ಕಾಶಿನಾಥ್ ಮತ್ತು ಮಂಜುನಾಥ ಮೇಳಕುಂದಿಯನ್ನೂ ಮಹಜರು ಸ್ಥಳಕ್ಕೆ ಕರೆದೋಯ್ದಿದಿದ್ದು ಅವರಿಮದ ಪಿಎಸ್ ಐ ಅಕ್ರಮದ ಮಾಹಿತಿ ಪಡೆಯುತ್ತಿದ್ದಾರೆ.