ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಚುರುಕುಗೊಳಿಸಿದ್ದು, DySP ಶಾಂತಕುಮಾರ್ ಸೇರಿದಂತೆ 6 ಜನರ ಮನೆಯಲ್ಲಿ ಸಿಐಡಿ ತಂಡ ಶೋಧ ನಡೆಸಿದೆ.
ಸಿಐಡಿ ತಂಡ ಶಾಂತಕುಮಾರ್ ಮತ್ತು ಶಾಂತಕುಮಾರ್ ಆಪ್ತ ಶ್ರೀಧರ್ ಮನೆಯಲ್ಲಿ ಶೋಧ ನಡೆಸಿದೆ. ಬಸವೇಶ್ವರ ನಗರದ ಶಾರದ ಕಾಲೋನಿಯಲ್ಲಿರುವ ಮನೆಗೆ ಶ್ರೀಧರ್ ನನ್ನು ಕರೆತಂದ ಸಿಐಡಿ ಟೀಂ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಸಿಐಡಿ ಟೀಂ ಶ್ರೀಧರ್ ನನ್ನು ಕರೆದೋಯ್ದಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ವಕೀಲೆಯ ಮೇಲೆ ಭಯಾನಕ ಹಲ್ಲೆ… ನಡು ರಸ್ತೆಯಲ್ಲೇ ರಾಕ್ಷಸನಂತೆ ವರ್ತಿಸಿದ ವ್ಯಕ್ತಿ…
ಮಧ್ಯವರ್ತಿಗಳ ಜೊತೆ ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ನೇಮಕಾತಿ ವಿಭಾಗದಲ್ಲಿ ಪ್ರಥಮ ದರ್ಜೆ ನೌಕರನಾಗಿರುವ ಶ್ರೀಧರ್ ನನ್ನು ಬಂಧಿಸಲಾಗಿತ್ತು. ಶ್ರೀಧರ್ ಮನೆಯಲ್ಲಿ 20 ಲಕ್ಷ ರೂ. ಹಣ ದೊರೆತಿರುವ ಮಾಹಿತಿ ಲಭ್ಯವಾಗಿದೆ. ಸಿಐಡಿ ತಂಡ ಶಾಂತಕುಮಾರ್, ಶ್ರೀಧರ್ ಮತ್ತು ಇತರೆ ಆರೋಪಿಗಳ ವಿಚಾರಣೆಯನ್ನು ನಡೆಸುತ್ತಿದ್ದಾರೆ.