ಕಲಬುರಗಿ: CID ಬಲೆಗೆ ಬಿದ್ದರೂ ಆರ್.ಡಿ. ಪಾಟೀಲ್ ಪೊಗರು ಇಳಿದಿಲ್ಲ,PSI ಅಕ್ರಮದಲ್ಲಿ ಲಾಕಾದ್ರೂ ಅದೇ ಧಿಮಾಕು, ದರ್ಪ ತೋರಿಸಿದ್ದು, ಫ್ರೀ ಆಫ್ ಕಾಸ್ಟ್ ಪ್ರಚಾರ ಕೊಡ್ತಿದ್ದೀರಾ.. ಕೊಡಿ. ಅಂತಾ ಕ್ಯಾಮೆರಾ ಕಡೆಗೆ ಹೆಬ್ಬೆಟ್ಟು ಥಂಬಿಂಗ್ ತೋರಿಸಿ ಧಿಮಾಕಿನ ಮಾತನಾಡಿದ್ದಾರೆ.
ಸಿಐಡಿ ಅಧಿಕಾರಿಗಳು ಆರ್.ಡಿ.ಪಾಟೀಲ್ ನನ್ನು ಸೊಲ್ಲಾಪುರದಿಂದ ಬಂಧಿಸಿ ಕರೆತಂದಿದ್ದಾರೆ. PSI ಪರೀಕ್ಷೆ ಅಕ್ರಮದಲ್ಲಿ ಪಾಟೀಲ್ ಬ್ರದರ್ಸ್ ಗೋಲ್ಮಾಲ್ ನಡೆಸಿದ್ದರು. ಆರ್.ಡಿ. ಪಾಟೀಲ್, ಮಹಾಂತೇಶ್ ಪಾಟೀಲ್ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಇವರು KAS, FDA, SDA ಪರೀಕ್ಷೆಗಳಲ್ಲಿ ಅಕ್ರಮ ಎಸಗಿರುವ ಶಂಕೆ ಇದೆ. ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಕೀ ಆನ್ಸರ್ ರವಾನಿಸ್ತಿದ್ದ ಆರ್. ಡಿ. ಪಾಟೀಲ್ ಸುಮಾರು 7 ಮಂದಿ ಅಭ್ಯರ್ಥಿಗಳಿಗೆ ಸಹಕಾರ ನೀಡಿರೋ ಶಂಕೆಯಿದೆ. ಇನ್ನೂ ಕಲಬುರಗಿಗೆ ಕರೆತರುತ್ತಿದ್ದಂತೆ ಆರ್.ಡಿ. ಪಾಟೀಲ್ ಧಿಮಾಕಿನ ಡೈಲಾಗ್ ಹೊಡೆದಿದ್ದಾನೆ.