ಬೆಂಗಳೂರು : CID ಸ್ಯಾಂಟ್ರೋನ ಇಂಚಿಂಚೂ ಮಾಹಿತಿ ಕಲೆ ಹಾಕ್ತಿದ್ದಾರೆ. ಕಿರಾತಕ ಎಲ್ಲಿ ಓಡಾಡ್ತಿದ್ದ.. ಯಾರನ್ನ ಭೇಟಿ ಮಾಡ್ತಿದ್ದ..?
ಯಾರ್ಯರಿಗೆ ಬಲೆ ಬೀಸ್ತಿದ್ದನೆಂದು CIDಯಿಂದ ಮಾಹಿತಿ ಕಲೆ ಹಾಗಿದ್ದಾರೆ. ಸ್ಯಾಂಟ್ರೋ ರವಿ ಪತ್ನಿ ಜೊತೆ ಸಿಐಡಿ ಸ್ಥಳ ಮಹಜರು ಪಡಿಸಿದ್ದಾರೆ. ಶೇಷಾದ್ರಿಪುರಂನ ವಾಹಬ್ ಅಪಾರ್ಟ್ಮೆಂಟ್ನಲ್ಲಿ ಮಹಜರ್ ಮಾಡಿದ್ದಾರೆ. DySP ಅಂಜುಮಾಲಾ ನಾಯಕ್ ನೇತೃತ್ವದಲ್ಲಿ ಮಹಜರು ಪಡಿಸಿದ್ದು, ಇಂಚಿಂಚೂ ಸ್ಥಳವನ್ನೂ ತಂಡ ಫುಲ್ ಸರ್ಚ್ ಮಾಡುತ್ತಿದೆ. ಹೋಟೆಲ್ ಸನ್ಮಾನ್ನಲ್ಲೇ ಕುಳಿತು ಸ್ಯಾಂಟ್ರೋ ರವಿ ಡೀಲ್..! ಸಿಐಡಿ ಹೋಟೆಲ್ ಸನ್ಮಾನ್ ಹೋಟೆಲ್ಗೂ ತೆರಳಿ ಸರ್ಚಿಂಗ್ ನಡೆಸಿದ್ದಾರೆ. ತಂಡ ಕಳೆದೊಂದು ತಿಂಗಳ ಸಿಸಿಟಿವಿ ದೃಶ್ಯ ಕಲೆಹಾಕ್ತಿದ್ದು, ಸ್ಯಾಂಟ್ರೋ ಕರೆತರ್ತಿದ್ದ ಅಧಿಕಾರಿಗಳ ಬಗ್ಗೆ ಸಿಐಡಿ ಮಾಹಿತಿ ನೀಡಿದೆ. ಸಿಸಿಟಿವಿ ದೃಶ್ಯಾವಳಿ ಮೂಲಕ ಮಾಹಿತಿ ಕಲೆಹಾಕ್ತಿದ್ದಾರೆ.
ಇದನ್ನೂ ಓದಿ : ಮುಂದಿನ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೇವೆ ..130ರಿಂದ 150 ಸ್ಥಾನವನ್ನ ಕಾಂಗ್ರೆಸ್ ಪಡೆಯಲಿದೆ : ಸಿದ್ದರಾಮಯ್ಯ…