ಚಿತ್ರದುರ್ಗ : ಶಿಕ್ಷಕ ವರ್ಗಾವಣೆಗೊಂಡಿದ್ದು ಬೀಳ್ಕೊಡುಗೆ ವೇಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಚಕರಿಗೋಸ್ಕರ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಗೌರಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ಪರಮೇಶ್ವರಪ್ಪ ದೈಹಿಕ ಶಿಕ್ಷಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದರು. ಶಿಕ್ಷಕ ಪರಮೇಶ್ವರಪ್ಪ ವರ್ಗಾವಣೆಯಾದ ಹಿನ್ನೆಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಕಣ್ಣಿರು ಹಾಕಿದ್ದಾರೆ.
ನೆಚ್ಚಿನ ಶಿಕ್ಷಕರನ್ನ ಅಡ್ಡಗಟ್ಟಿ ಶಾಲೆಯಿಂದ ಹೋಗದಂತೆ ವಿದ್ಯಾರ್ಥಿಗಳು ಮನವಿ ಮಾಡಿದರು. ನೂರಾರು ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕ ಪರಮೇಶ್ವರಪ್ಪ ಕಣ್ಣಿರು ಹಾಕಿದರು.
ಇದನ್ನೂ ಓದಿ : ಕಾರ್ ರಿಲೀಸ್ಗೆ 12 ಸಾವಿರ ಲಂಚ ಪಡೆದಿದ್ದ ಕಾನ್ಸ್ಟೇಬಲ್ ಬೇಲ್ ಅರ್ಜಿ ವಜಾ…!