ಚಿತ್ರದುರ್ಗ : ಕೋಟೆನಾಡಲ್ಲಿ ಕೇಸರಿ ಕಲರವ ಜೋರಾಗಿದ್ದು, ಚಿತ್ರದುರ್ಗದ ರಸ್ತೆ.. ರಸ್ತೆಗಳಲ್ಲೂ ಬಿಜೆಪಿ ಬಾವುಟ ಹಾರಾಟ ಮಾಡುತ್ತಿದೆ. 2023ರ ಚುನಾವಣೆಗೆ ಬಿಜೆಪಿ ರಣತಂತ್ರ ಮಾಡುತ್ತಿದೆ. ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಜನಪ್ರತಿನಿಧಿಗಳ ಸಮಾವೇಶ ನಡೆಯುತ್ತಿದ್ದು, ಮುರುಘಾಮಠದ ಅನುಭವ ಮಂಟಪ ಸಭಾಂಗಣದಲ್ಲಿ ಸಮಾವೇಶ ನಡೆಯುತ್ತಿದೆ.
ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಭಾಗಿಯಾಗಿದ್ದರು. ಜೆ.ಪಿ ನಡ್ಡಾ ಎಂಟ್ರಿ, ಬಿಜೆಪಿ ನಾಯಕರಲ್ಲಿ ಭಾರೀ ಉತ್ಸಾಹವಿತ್ತು. ಜೆಪಿ ನಡ್ಡಾ ಮುರುಘಾ ಶ್ರೀಗಳನ್ನೂ ಭೇಟಿ ಮಾಡಿದ್ದರು. ಜೆ.ಪಿ ನಡ್ಡಾಗೆ ಬೆಳ್ಳಿ ಗದೆ ನೀಡಿ ಸ್ವಾಗತ ಮಾಡಲಾಯಿತು. ಸಿಎಂ, ಬೊಮ್ಮಾಯಿ, ಕಟೀಲ್ ಜೆ.ಪಿ ನಡ್ಡಾ ಸ್ವಾಗತಿಸಿದ್ದರು. ಸಮಾವೇಶದಲ್ಲಿ ಸಂಸದ ನಾರಾಯಣ ಸ್ವಾಮಿ, ಶ್ರೀನಿವಾರ ಪೂಜಾರಿ, ಸಚಿವ ರಾಮುಲು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಇದನ್ನೂ ಓದಿ : ಅಗ್ನಿಪಥ್ ಯೋಜನೆ ಖಂಡಿಸಿ ಜೂನ್ 20 ರಂದು ಬೆಳಗಾವಿ ಬಂದ್ಗೆ ಕರೆ..!