ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಾಲೂರು ಸಮೀಪ ಸರಣಿ ಆಕ್ಸಿಡೆಂಟ್ ಆದ ಹಿನ್ನೆಲೆ 30 ವರ್ಷದ ಹನುಮಂತಪ್ಪ, 29 ವರ್ಷದ ಪ್ರಶಾಂತ್ ಹಟ್ಟಿ 29 ವರ್ಷದ ಗುರಪ್ಪ ಹೂಗಾರ್, 30 ವರ್ಷದ ರಮೇಶ್ ಸಾವನಪ್ಪಿದ್ದಾರೆ. ಮೃತರೆಲ್ಲರೂ ಗದಗ ಜಿಲ್ಲೆ ಹುಯಿಲಗೋಳ ಮೂಲದವರಾಗಿದ್ದು, 3 ಈಚರ್ ವೆಹಿಕಲ್, 3 ಲಾರಿ, 1 ಕಾರ್ ನಡುವೆ ಸರಣಿ ಅಪಘಾತವಾಗಿದೆ. ಈರುಳ್ಳಿ ಹೊತ್ತು ಬೆಂಗಳೂರಿಗೆ ಬರ್ತಿದ್ದ ಲಾರಿ, ಸರಣಿ ಅಪಘಾತದಲ್ಲಿ 4 ಮಂದಿ ಸಾವನಪ್ಪಿದ್ದು, 10 ಮಂದಿಗೆ ಗಾಯಗಳಾಗಿದೆ. ಗಾಯಾಳುಗಳು ಹಿರಿಯೂರು, ಚಿತ್ರದುರ್ಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಚಿತ್ರದುರ್ಗ SP ಜಿ. ರಾಧಿಕಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅವಘಡದಿಂದಾಗಿ ರಸ್ತೆಯಲ್ಲಿ ಈರುಳ್ಳಿ ಚೆಲ್ಲಾಪಿಲ್ಲಿಯಾಗಿದೆ.