ಬೆಂಗಳೂರು: ರಸಗೊಬ್ಬರ ತಯಾರಿಕಾ ಕಂಪನಿ ಇಫ್ಕೋದ ನ್ಯಾನೋ ಯೂರಿಯಾ ಬಳಸಿದ್ದರಿಂದಾಗಿ ಮೆಕ್ಕೆ ಜೋಳ ಬೆಳೆ ಒಣಗಿದೆ. ನಮಗೆ ಪರಿಹಾರ ನೀಡಿ ಎಂದು ರೈತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ರೈತರು ಇಫ್ಕೋದಿಂದ ದ್ರವರೂಪದ ನ್ಯಾನೋ ಗೊಬ್ಬರ ಖರೀದಿಸಿ ಮೆಕ್ಕೆ ಜೋಳ ಬೆಳೆಗೆ ಹಾಕಿದ್ದರು. ನ್ಯಾನೋ ಯೂರಿಯಾ ಹಾಕಿದ 20 ದಿನಗಳಲ್ಲಿ ಜೋಳ ಒಣಗಿಹೋಗಿದೆ. ಒಟ್ಟು 10 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆ ಜೋಳ ಒಣಗಿಹೋಗಿದೆ ಎಂದು ಮುಖ್ಯಮಂತ್ರಿಗಳಿಗೆ ಸಿರಿಗೆರೆ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರು ಸಿಎಂ ಬಸವರಾಜ ಬೊಮ್ಮಾಯಿ ಅವರ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ವೇಳೆ ಅವರು ಮೆಕ್ಕೆ ಜೋಳ ಒಣಗಿದ್ದಕ್ಕೆ ನಮಗೆ ಪರಿಹಾರ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.