ಚಿತ್ರದುರ್ಗ: ಪೂಜೆ ಮಾಡಿದರೆ IPS, IAS ಆಗ್ತೀವಿ ಅಂತಾ ಕನಸು ಕಂಡು, ಕಂಡ ಕಂಡ ಜ್ಯೋತಿಷಿಗಳನ್ನ ನಂಬಿ ಕೇಳಿದಷ್ಟು ಹಣ ಕೊಡುತ್ತಿದ್ದೀರಾ, ನಿಮ್ಮ ವೀಕ್ನೆಸ್ ಅನ್ನೇ ಎನ್ಕ್ಯಾಷ್ ಮಾಡಿಕೊಳ್ಳೋ ಜ್ಯೋತಿಷಿಗಳು, ಪೂಜೆ ಮಾಡೋ ನೆಪದಲ್ಲಿ ಚಿನ್ನ ಕಿತ್ತು ಪರಾರಿಯಾಗುತ್ತಾರೆ.
ಚಿತ್ರದುರ್ಗದ ಚಳ್ಳಕೆರೆ ಪೊಲೀಸರ ಕಾರ್ಯಾಚರಣೆಯಲ್ಲಿ ನಕಲಿ ಜ್ಯೋತಿಷಿಗಳು ಬಲೆಗೆ ಬಿದ್ದಿದ್ದು, ಪೂಜೆ ಮಾಡೋ ನೆಪದಲ್ಲಿ ಚಿನ್ನ ಕಿತ್ತು ಪರಾರಿಯಾಗಿದ್ದ ನಕಲಿ ಜ್ಯೋತಿಷಿಗಳು ಅರೆಸ್ಟ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೂಜೆಯ ವಿಡಿಯೋ ಹಾಕಿದ್ದಾರೆ, ಈ ವಿಡಿಯೋ ನೋಡಿ ಜ್ಯೋತಿಷಿಗಳಿಗೆ ಯುವತಿ ಕರೆ ಮಾಡಿದ್ದರು. ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ಬೇಗ ರಿಸಲ್ಟ್ ಸಿಗುತ್ತೆ ಅಂತ ಕಥೆ ಕಟ್ಟಿದ್ದಾರೆ. ನಂತರ ಚಿನ್ನಾಭರಣ ತರಿಸಿ ಪೂಜೆ ನೆಪದಲ್ಲಿ ಯುವತಿ ಬಳಿ 170 ಗ್ರಾಂ ಚಿನ್ನ ಕದ್ದು, ನಕಲಿ ಆನ್ಲೈನ್ ಜ್ಯೋತಿಷಿಗಳು ಪರಾರಿಯಾಗಿದ್ದಾರೆ.
ಬಂಡೆಪ್ಪ ಹನುಮಂತಪ್ಪ, ಭೀಮರಾವ್ ಬಂಡೆಪ್ಪ, ಗಣೇಶ್ ಬಂಧಿತ ಆರೋಪಿಗಳಾಗಿದ್ದು, ಸಾಫ್ಟ್ ವೇರ್, ಡಾಕ್ಟರ್, ಫೈನಾನ್ಸ್ ಮಾಡೋರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಇವರು 67 ಯುವತಿಯರಿಗೆ ವಂಚನೆ ಮಾಡಿದ್ದು, ಇವರ ಪೈಕಿ ಬೆಂಗಳೂರಿನವರೇ 35 ಜನರಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಇವರು ಲವ್ ಫೇಲ್ಯೂರ್ ಆದವರು, ಐಟಿ ಮಹಿಳಾ ಉದ್ಯೋಗಿಗಳೇ ಇವರ ಟಾರ್ಗೆಟ್ ಮಾಡುತ್ತಿದ್ದರು. ಇವರು ಯುವತಿಯ ತೊಡೆ ಮೇಲೆ ಬ್ರೇಕಪ್ ಆದ ಹುಡುಗನ ಹೆಸರು ಬರೆದು ಕಳಿಸಲು ಹೇಳುತ್ತಿದ್ದರು. ಆರೋಪಿಗಳ ಮಾತು ನಂಬಿ ಫೋಟೊ ಕಳುಹಿಸುತ್ತಿದ್ದ ಪಾಪದ ಯುವತಿಯರು ಅವರ ಜಾಲಕ್ಕೆ ಸಿಲುಕುತ್ತಿದ್ದರು. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿಯಲ್ಲಿ ವಂಚಕರನ್ನ ಪೊಲೀಸರು ಬಂಧಿಸಿದ್ದಾರೆ. ಚಳ್ಳಕೆರೆ DySP ಕೆ.ವಿ ಶ್ರೀಧರ್ ತಂಡದಿಂದ ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.