ಚಿತ್ರದುರ್ಗ : ರಾಜ್ಯದಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು , ಈ ಹಿನ್ನಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಕೊರೋನಾ ಸ್ಫೋಟವಾಗಿದೆ. ಶಾಲಾ- ಕಾಲೇಜುಗಳಲ್ಲಿ ಬಿಟ್ಟು ಬಿಡದೇ ವೈರಸ್ ಕಾಡುತ್ತಿದೆ .
ಚಿತ್ರದುರ್ಗದ ಸ್ವಾಮಿ ವಿವೇಕಾನಂದ ನರ್ಸಿಂಗ್ ಕಾಲೇಜಿನ 22 ವಿಧ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು ,
ಹಿರಿಯೂರು ಬಸವರಾಜ ನರ್ಸಿಂಗ್ ಕಾಲೇಜಿನ 8 ವಿಧ್ಯಾರ್ಥಿಗಳಿಗೆ ಸೋಂಕು ಬಂದಿದೆ. ಡಾನ್ ಬಾಸ್ಕೋ ಶಾಲೆಯ 8 ವಿದ್ಯಾರ್ಥಿಗಳಲ್ಲಿ , ಸೆಂಟ್ ಮೇರಿಸ್ ನರ್ಸಿಂಗ್ ಕಾಲೇಜಿನ ಇಬ್ಬರಿಗೆ ಕೊವೀಡ್ ಪಾಸಿಟಿವ್ ಬಂದಿದೆ.
ಬಸವೇಶ್ವರ ಮೆಡಿಕಲ್ ಕಾಲೇಜಿನ 5 ವಿಧ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು , ಜಿಲ್ಲೆಯಲ್ಲಿನ ಒಟ್ಟು 44 ಕಾಲೇಜು ವಿಧ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದೆ ಎಂದು ಚಿತ್ರದುರ್ಗ DHO ಡಾ.ರಂಗನಾಥ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕೊರೋನಾ ಲಸಿಕಾ ಅಭಿಯಾನಕ್ಕೆ ಇಂದಿಗೆ 1 ವರ್ಷ.. ! ಭಾರತದಲ್ಲಿ ಈವರೆಗೆ 156 ಕೋಟಿ ಡೋಸ್ ವಿತರಣೆ..