ಚಿತ್ರದುರ್ಗ: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ಮನೆಯಲ್ಲೇ ಶವ ಹೂತಿಟ್ಟಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತ್ನಿ ನಾಪತ್ತೆಯಾಗಿದ್ದಾಳೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಚಿತ್ರದುರ್ಗದ ಕೋಣನೂರು ಗ್ರಾಮದಲ್ಲಿ ಘಟನೆ ನಡೆದಿದೆ. ನಾರಪ್ಪ ಎಂಬಾತ ತನ್ನ ಹೆಂಡತಿ ಸುಮಾ (26) ಳನ್ನು ಕೊಲೆ ಮಾಡಿದ ಬಳಿಕ ಆಕೆ ನಾಪತ್ತೆಯಾಗಿದ್ದಾಳೆಂದು ಮಾವನ ಜೊತೆ ಠಾಣೆಗೆ ಹೋಗಿ ನಾಪತ್ತೆ ಪ್ರಕರಣ ದಾಖಲಿಸಿದ್ದ.
ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಲ್ಲಿ ಭೀಕರ ಮರ್ಡರ್ ರಹಸ್ಯ ಬಯಲಾಗಿದೆ. ಆರೋಪಿ ನಾರಪ್ಪ ಪೊಲೀಸರ ತನಿಖೆ ಬಳಿಕ ಫೋನ್ ಸ್ವಿಚ್ ಆಪ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ . ಆರೋಪಿ ನಾರಪ್ಪನ ಸೆರೆಗೆ ಭರಮಸಾಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಪೊಲೀಸರ ತಂಡ ಮನೆಯ ಒಳಗೆ ಸೀಮೆಂಟ್ ಹಾಕಿ ಮುಚ್ಚಿದ್ದ ಶವವನ್ನು ಹೊರಗೆ ತೆಗೆದಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಯೂನಿವರ್ಸಲ್ ಪಾಸ್ ತರಲು ಪ್ಲ್ಯಾನ್… 2 ಡೋಸ್ ಪಡೆದವರಿಗೆ ಯೂನಿವರ್ಸಲ್ ಪಾಸ್: ಕೆ. ಸುಧಾಕರ್…