ಬೆಂಗಳೂರು : ಭಾರತದ ನಿಯಮ ಉಲ್ಲಂಘನೆ ಆರೋಪದ ಮೇಲೆ ಹಾಗೂ ಸರ್ಕಾರಕ್ಕೆ ಭಾರೀ ಪ್ರಮಾಣದ ತೆರಿಗೆ ವಂಚನೆ ಆರೋಪದಿಂದಾಗಿ ಚೀನಾ ಮೊಬೈಲ್ ಕಂಪನಿಗಳ ಮೇಲೆ ಐಟಿ ದಾಳಿ ನಡೆಸಿದ್ದಾರೆ.
ಬೆಂಗಳೂರು ಸೇರಿ ದೇಶಾದ್ಯಂತ ಚೀನಾ ಮೊಬೈಲ್ ಕಂಪನಿಗಳ ಮೇಲೆ ಐಟಿ ದಾಳಿ ನಡೆದಿದ್ದು, ಭಾರತದ ನಿಯಮ ಉಲ್ಲಂಘನೆ ಆರೋಪದ ಮೇಲೆ , ಸರ್ಕಾರಕ್ಕೆ ಭಾರೀ ಪ್ರಮಾಣದ ತೆರಿಗೆ ವಂಚನೆ ಆರೋಪದಿಂದಾಗಿ ಐಟಿ ದಾಳಿ ನಡೆಸಲಾಗಿದೆ.
ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಶವೋಮಿ, ಒನ್‌ಪ್ಲಸ್, ಒಪೋ ಮೇಲೆ ಐಟಿ ದಾಳಿಯಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ , ನೋಯ್ಡಾ, ಕೋಲ್ಕತಾ, ಗುವಾಹಟಿ ಸೇರಿ ಹಲವೆಡೆ ರೇಡ್ ಆಗಿದ್ದು, ಮೊಬೈಲ್ ವಿತರಕ ಸಂಸ್ಥೆಗಳನ್ನೂ ಜಾಲಾಡಿದೆ. ಚೀನೀ ಮೊಬೈಲ್ ಕಂಪನಿಗಳ ಉತ್ಪಾದನಾ ಘಟಕಗಳು , ಗೋಡೌನ್‌ಗಳು, ಕಾರ್ಪೊರೇಟ್ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದು ,ಐಟಿ ಅಧಿಕಾರಿಗಳು ಹಲವು ಮಹತ್ವದ ದಾಖಲೆ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಸರ್ಕಾರಿ ನೌಕರರು ಕೋವಿಡ್ ಲಸಿಕೆ ಪಡೆಯದಿದ್ದರೆ ಸಂಬಳವಿಲ್ಲ… ಪಂಜಾಬ್ ಸರ್ಕಾರದ ಆದೇಶ…