ಬೀಜಿಂಗ್: ತೈವಾನ್ ಗೆ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭೇಟಿಯಿಂದ ಕೆರಳಿರುವ ಚೀನಾ ತೈವಾನ್ ಸುತ್ತಲೂ 6 ಸ್ಥಳಗಳಲ್ಲಿ ಸಮರಾಭ್ಯಾಸವನ್ನು ಆರಂಭಿಸಿದ್ದು, ಸಮುದ್ರಕ್ಕೆ 11 ಡಾಂಗ್‌ಫೆಂಗ್ ಖಂಡಾಂತರ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ.
ಚೀನಾ ಸೇನೆ ತೈವಾನ್ ಸುತ್ತಲೂ ಸಮರಾಭ್ಯಾಸ ಆರಂಭಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತೈವಾನ್ ವಿಮಾನಗಳನ್ನು ರದ್ದುಮಾಡಿದೆ. ಜೊತೆಗೆ ವಾಣಿಜ್ಯ ಹಡಗುಗಳ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಚೀನಾ ಸೇನೆ ಚೀನಾ ಮತ್ತು ತೈವಾನ್ ಜಲ ಗಡಿಯನ್ನು ಹಲವೆಡೆ ಉಲ್ಲಂಘಿಸಿ ಸಮರಾಭ್ಯಾಸ ನಡೆಸುತ್ತಿದೆ.
PLA has launched multiple DF ballistic #missiles at our NE and SW waters since 13:56. #ROCArmedForces have monitored the situation with various means, while our defense systems have been activated. We condemn such irrational action that has jeopardized regional peace. pic.twitter.com/9JAFVBJIUO
— 國防部 Ministry of National Defense, R.O.C. 🇹🇼 (@MoNDefense) August 4, 2022
ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ತನಿಖೆ ಸ್ಟಾರ್ಟ್ ಮಾಡಿದ NIA…! ಪ್ರವೀಣ್ ಹತ್ಯೆಯಾದ ಜಾಗ, ಸಂಚು ರೂಪಿಸಿದ ಸ್ಥಳಕ್ಕೆ ಭೇಟಿ..!
ಚೀನಾ ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿ ಸಮರಾಭ್ಯಾಸ ನಡೆಸುತ್ತಿದೆ. ಚೀನಾ ಸೇನೆ ತೈವಾನ್ ನ ಗಡಿಯನ್ನು ಉಲ್ಲಂಘಿಸುತ್ತಿದೆ. ಇದು ವಾಯು ಮಾರ್ಗ ಮತ್ತು ಅಂತಾರಾಷ್ಟ್ರೀಯ ಸಮುದ್ರ ಮಾರ್ಗದ ಬಳಕೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ತೈವಾನ್ ಅಧಿಕಾರಿಗಳು ತಿಳಿಸಿದ್ದಾರೆ. ಇಂದಿನಿಂದ ಆರಂಭವಾಗಿರುವ ಚೀನಾದ ಸಮರಾಭ್ಯಾಸ ಭಾನುವಾರದವರೆಗೂ ನಡೆಯಲಿದೆ.
VIDEO: Chinese military helicopters fly past Pingtan island, one of mainland China's closest points to Taiwan, in Fujian province on Thursday.
China has begun massive military drills off Taiwan following US House Speaker Nancy Pelosi's visit to the self-ruled island pic.twitter.com/7czzPNQbNp
— AFP News Agency (@AFP) August 4, 2022
ಬುಧವಾರ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಗೆ ಭೇಟಿ ನೀಡುವುದಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ವಿರೋಧದ ನಡುವೆಯೂ ಪೆಲೋಸಿ ತೈವಾನ್ ಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ಯುದ್ಧ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೇನೆಗೆ ಆದೇಶಿಸಿತ್ತು. ಇದೇ ವೇಳೆ ತೈವಾನ್ ಸಹ ಚೀನಾ ದಾಳಿಯನ್ನು ಎದುರಿಸಲು ಸರ್ವ ಸನ್ನದ್ಧವಾಗಿತ್ತು. ಪೆಲೋಸಿ ತೆರಳಿದ ಬಳಿಕ ತೈವಾನ್ ಮೇಲೆ ಆರ್ಥಿಕ ಯುದ್ಧ ಸಾರಿರುವ ಚೀನಾ ತೈವಾನ್ ನ ಹಲವು ಉತ್ಪನ್ನಗಳ ಆಮದನ್ನು ನಿಷೇಧಿಸಿದೆ.
ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ಸಚಿವ ಆರ್.ಅಶೋಕ್..! ಅಮಿತ್ ಶಾ ಭೇಟಿ ಬಳಿಕ ಸೀದಾ ಮಳೆ ಪೀಡಿತ ಪ್ರದೇಶಕ್ಕೆ ಅಶೋಕ್..!
Chinese military exercises.#AFPGraphics map of Taiwan and its surrounding waters, highlighting the areas of the Chinese military drills from August 4 to 7. At some points the "live-fire drills" will take place within just 20 kilometres (12 miles) of the island's shore pic.twitter.com/Jtukwvzub5
— AFP News Agency (@AFP) August 4, 2022