ಬೆಂಗಳೂರು: ಚಿಕನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ನಾನ್ ವೆಜ್ ತಿನ್ನೋರಿಗಂತೂ ಚಿಕನ್ ಅಂದ್ರೆ ಅಚ್ಚುಮೆಚ್ಚು. ಅದ್ರಲ್ಲೂ ಗ್ರೇವಿ ರೆಸಿಪಿಗಿಂತ ಡ್ರೈ ಹಾಗೂ ಪ್ರೈ ಆಗಿರುವ ರೆಸಿಪಿ ಅಂದ್ರೆ ಹೆಚ್ಚಾಗಿ ಮಾಂಸ ಪ್ರಿಯರು ಇಷ್ಟ ಪಡುತ್ತಾರೆ. ಅಂತದ್ದೇ ರೆಸಿಪಿಗಳಲ್ಲಿ ಚಿಕನ್ ಪೆಪ್ಪರ್ ಡ್ರೈ ಕೂಡ ಒಂದು.. ಇಲ್ಲಿದೆ ಈಸಿ ರೆಸಿಪಿ…
ಬೇಕಾದ ಸಾಮಾಗ್ರಿಗಳು..
ಚಿಕನ್ – 1 ಕೆ.ಜಿ, ಈರುಳ್ಳಿ – 1, ಕರಿಮೆಣಸಿನ ಪುಡಿ – 2 ಚಮಚ, ಒಣ ಮೆನಸಿನಕಾಯಿ, ಖಾರದ ಪುಡಿ – 1, ದನಿಯಾ ಪುಡಿ – 2 ಚಮಚ, ಕೊತ್ತಂಬರಿ ಸೊಪ್ಪು, ಎಣ್ಣೆ, ಬಿಡಿಸಿ ಜೆಜ್ಜಿದ ಬೆಳ್ಳುಳ್ಳಿ-15 ಅರಿಶಿಣ – ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು.
ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಜೆಜ್ಜಿದ ಬೆಳ್ಳುಳ್ಳಿ ಹಾಕಿ, ಅದು ಕಂದು ಬಣ್ಣಕ್ಕೆ ತಿರುಗಿದ ಬಳಿಕ ಅದಕ್ಕೆ ಕರಿಬೇವು, ಒಣ ಮೆಣಸಿನ ಕಾಯಿ ಮುರಿದು ಹಾಕಿ. ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಚಿಕನ್ ತುಂಡುಗಳನ್ನು ಹಾಕಿ ಬೆರೆಸಿ. ಉಪ್ಪು ಹಾಕಿ ಚಿಕನ್ ಬೇಯಲು ಬಿಡಿ. ಚಿಕನ್ ಬೆಂದ ನಂತರ ಅದಕ್ಕೆ ಖಾರದ ಪುಡಿ, ದನಿಯಾ ಪುಡಿ, ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಕರಿಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಕೊನೆಗೆ ಕರಿಬೇವಿನ ಸೊಪ್ಪು ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಯಾದ ಚಿಕನ್ ಪೆಪ್ಪರ್ ಡ್ರೈ ರೆಡಿ.
ಇದನ್ನೂ ಓದಿ: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ… ಇನ್ನು ಮಂದಿರ ಹೋರಾಟಕ್ಕೆ ಬರಲ್ಲ: ಮೋಹನ್ ಭಾಗವತ್…