ಚಾಮರಾಜಪೇಟೆ: ಮತ್ತೊಂದು ಸಮರಕ್ಕೆ ಚಾಮರಾಜಪೇಟೆ ಮೈದಾನ ಸಜ್ಜಾಗಿದ್ದು, ಸ್ಥಳೀಯ ಒಕ್ಕೂಟಗಳು ಗಣರಾಜ್ಯೋತ್ಸವ ಆಚರಣೆಗೆ ಮುಂದಾಗಿದೆ.
ಹಿಂದೂಪರ ಸಂಘಟನೆ, ಚಾಮರಾಜಪೇಟೆ ನಾಗರಿಕರ ಒಕ್ಕೂಟ ತಯಾರಿ ನಡೆಸಿದ್ದು, ಸರ್ಕಾರಕ್ಕೆ ಸೆಡ್ಡು ಹೊಡೆದು ಗಣರಾಜ್ಯೋತ್ಸವ ಆಚರಣೆಗೆ ಪ್ಲಾನ್ ಮಾಡಲಾಗುತ್ತಿದೆ. ಕೆಲಹೊತ್ತಿನಲ್ಲೇ ಒಕ್ಕೂಟದ ಮುಖಂಡರು ಸಭೆ ಮಾಡಲಿದ್ದು, ಚಾಮರಾಜಪೇಟೆಯ ಜನತಾ ಕಾಲೋನಿಯಲ್ಲಿ ಸಭೆ ನಡೆಯಲಿದೆ. ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಡೆಡ್ಲೈನ್ ನೀಡಿದ್ದು, ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿಯಲಾಗಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಮುಖಂಡರ ಬೇಸರ ವ್ಯಕ್ತ ಪಡಿಸಿದ್ದು, ಗಣರಾಜ್ಯೋತ್ಸವ ಯಾವ ರೀತಿ ಮಾಡ್ಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ.
ಇದನ್ನೂ ಓದಿ:ಬಳ್ಳಾರಿ ಉತ್ಸವಕ್ಕೆ ಬಂದಿದ್ದ ಗಾಯಕಿ ಮಂಗ್ಲಿ ಕಾರಿನ ಗ್ಲಾಸ್ ಹೊಡೆದ ಪುಂಡರು…