ಲಾಕ್ಡೌನ್ ಬೋರಿಂಗ್ ಡೇಸ್ನಿಂದ ಸ್ಯಾಡಂಲ್ವುಡ್ ಸ್ಟಾರ್ಸ್ಗಳು ಒರಗೆ ಬರ್ತಿದ್ದಾರೆ, ಇತ್ತೀಚೆಗಷ್ಟೆ ಅಪ್ಪು, ಶಿವಣ್ಣ ಫೀಲ್ಡ್ಗೆ ಇಳಿದು ಸಖತ್ ಆಗಿ ಗೇಮ್ ಆಡಿದ್ರು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊರೋನಾವನ್ನ ಮರೆತು ರೈತನ ಮಗನಾಗಿ ಎತ್ತಿನ ಗಾಡಿ ಹತ್ತಿದ್ದಾರೆ. ಇತ್ತ ಬಟ್ಟಲು ಕಣ್ಣಿನ ಚೆಲುವೆ ಪ್ರಣಿತ ಕುದುರೆ ಸವಾರಿ ಮಾಡಿದ್ದಾರೆ. ಈ ಇಬ್ಬರು ಸ್ಟಾರ್ಸ್ಗಳ ವಿಡಿಯೋ ಸಖತ್ ವೈರಲ್ ಆಗ್ತಿವೆ.
ಕೊರೋನಾ ಲಾಕ್ಡೌನ್ ಆದಾಗಿನಿಂದ ಹೊರಗೆಲ್ಲೂ ಅಷ್ಟಾಗಿ ಕಾಣಿಸಿಕೊಳ್ಳದ ದಚ್ಚು, ತಮ್ಮ ಮೈಸೂರಿನ ಫಾಮ್ ಹೌಸ್ ಆಯ್ತು ಬೆಂಗಳೂರಿನ ಮನೆ ಆಯ್ತು ಅಂತ ಇದ್ರು. ಆದ್ರೀಗ ದರ್ಶನ್ ಪೇಡದ ನಗರಿ ಧಾರವಾಡಗೆ ಇದೇ ವೇಳೆ ದಚ್ಚು ಎತ್ತಿನ ಗಾಡಿಯಲ್ಲಿ ರೈತರನ್ನ ಹತ್ತಿಸಿಕೊಂಡು ಓಡಿಸಿ ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ,
ಚಂದನವನದ ಚಂದದ ಚೆಲುವೆ ಪ್ರಣಿತಾ ಸುಭಾಷ್ ಕೊರೋನಾ ಲಾಕ್ಡೌನ್ ಆದಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ರು. ಆದ್ರೆ ಹೊರಗೆಲ್ಲೂ ಅಷ್ಟಾಗಿ ಕಾಣಿಸಿಕೊಂಡಿರರಿಲ್ಲಾ.. ಈಗ ಫಿಟ್ನೆಸ್ಗಾಗಿ ಕುದುರೆ ಹತ್ತಿ ಹಾರ್ಸ್ ರೈಡಿಂಗ್ ಮಾಡಿದ್ದಾರೆ.