ನವದೆಹಲಿ: ಏರ್ ಇಂಡಿಯಾ ಹಸ್ತಾಂತರ ಪ್ರಕ್ರಿಯೆ ಇಂದಿಗೆ ಪೂರ್ಣಗೊಂಡಿದ್ದು, ಇಂದು ನಾಗರಿಕ ವಿಮಾನಯಾನ ಸಚಿವಾಲಯವು ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಗೆ ಹಸ್ತಾಂತರಿಸಿದೆ. ಈ ಮೂಲಕ 69 ವರ್ಷಗಳ ಬಳಿಕ ಏರ್ ಇಂಡಿಯಾ ಮರಳಿ ಟಾಟಾ ಗ್ರೂಪ್ ತೆಕ್ಕೆಗೆ ಬಂದಿದೆ.
Your arrival was much awaited, @airindiain. #AirIndiaOnBoard #ThisIsTata pic.twitter.com/OVJiI1eohU
— Tata Group (@TataCompanies) January 27, 2022
ಟಾಟಾ ಗ್ರೂಪ್ ನ ಎನ್ ಚಂದ್ರಶೇಖರ್ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಏರ್ ಇಂಡಿಯಾ ಕಚೇರಿಯಲ್ಲಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿತು.
#FlyAI : Air India Limited, Air India Express & AISATS (AI stake) have become part of the Tata Group today.
Senior Officials of @TataCompanies , @SecyDIPAM and @MoCA_GoI met at Airlines House New Delhi. pic.twitter.com/HA4aEkVwWX
— Air India (@airindiain) January 27, 2022
ಸಾವಿರಾರು ಕೋಟಿ ರೂ. ಸಾಲದ ಸುಳಿಗೆ ಸಿಲುಕಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಕೇಂದ್ರ ಸರ್ಕಾರ ಬಂಡವಾಳ ಹಿಂಪಡೆತದ ಭಾಗವಾಗಿ ಹರಾಜು ಹಾಕಿತ್ತು. ಹರಾಜು ಪ್ರಕ್ರಿಯೆಯಲ್ಲಿ ಹಲವು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಟಾಟಾ ಗ್ರೂಪ್ ಬಿಡ್ ಗೆದ್ದಿತ್ತು. ಕಳೆದ ವರ್ಷದ ಅಕ್ಟೋಬರ್ ನಲ್ಲಿ 18 ಸಾವಿರ ಕೋಟಿ ರೂ. ಗೆ ಟಾಟಾ ಗ್ರೂಪ್ ಬಿಡ್ ಗೆದ್ದಿತ್ತು. ಆ ಬಳಿಕ ಏರ್ ಇಂಡಿಯಾ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿತ್ತು. ಇಂದು ಅಧಿಕೃತವಾಗಿ ಏರ್ ಇಂಡಿಯಾ ಹಸ್ತಾಂತರವಾಗಿದ್ದು, ಇನ್ನು ಮುಂದೆ ಟಾಟಾ ಗ್ರೂಪ್ ಒಡೆತನದಲ್ಲಿ ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸಲಿದೆ.
Shri N Chandrasekaran, the Chairman of Tata Sons called on PM @narendramodi. @TataCompanies pic.twitter.com/7yP8is5ehw
— PMO India (@PMOIndia) January 27, 2022
Message from our Chairman N. Chandrasekaran welcoming @airindiain back. #AirIndiaOnboard #ThisIsTata pic.twitter.com/5AmQRMTXWL
— Tata Group (@TataCompanies) January 27, 2022