ಬೆಂಗಳೂರು: ಪತ್ನಿಯ 2 ನೇ ಗಂಡನ ಹತ್ಯೆಗೆ ಸ್ಕೆಚ್ ಹಾಕಿ, ಆತನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದ 3 ನೇ ಪತಿ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಮಹಿಳೆಯ ಹಾಲಿ ಪತಿ ಅರುಣ್ @ ನಾಯ್ಡು, ವಿಶಾಲ್, ಕಾರ್ತಿಕ್ @ ಜರಾಲ್ಡ್, ಯಶವಂತ್, ಸಂಜಯ್ ಎಂಬುವವರನ್ನು ಅರೆಸ್ಟ್ ಮಾಡಿದ್ದಾರೆ.
ಅರುಣ್ ನ ಪತ್ನಿ 17 ವರ್ಷಗಳ ಹಿಂದೆ ಲಕ್ಷ್ಮಣ್ ಎಂಬುವವರನ್ನು ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದಳು. ಆ ಬಳಿಕ ಆಕೆ ಶ್ರೀಕಾಂತ್ ಎಂಬಾತನನ್ನು ಮದುವೆಯಾಗಿ ಆತನಿಂದಲೂ ಡಿವೋರ್ಸ್ ಪಡೆದಿದ್ದಳು. ಆ ಬಳಿಕ ಅರುಣ್ ನೊಂದಿಗೆ ಮೂರನೇ ಮದುವೆಯಾಗಿದ್ದಳು.
ಇದನ್ನೂ ಓದಿ: ಸಿದ್ದರಾಮಯ್ಯ ಕೊಟ್ಟ ಹೇಳಿಕೆಗೆ ಅವರೇ ಉತ್ತರ ಕೊಡ್ತಾರೆ… ಈಗಾಗಲೇ ಅವರು ಟ್ವೀಟ್ ಮಾಡಿದ್ದಾರೆ: ಡಿಕೆ ಶಿವಕುಮಾರ್…
3 ನೇ ಮದುವೆ ಮಾಡಿಕೊಂಡಿದ್ದ ಮಹಿಳೆಯೊಂದಿಗೆ ಶ್ರೀಕಾಂತ್ ಗಲಾಟೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಕೆರಳಿದ ಹಾಲಿ ಪತಿ ಅರುಣ್ ಮಹಿಳೆಯ ಮಾಜಿ ಪತಿ ಶ್ರೀಕಾಂತ್ ನನ್ನು ಕೊಲೆ ಮಾಡಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಆತ ಮತ್ತು ಆತನ ಸಹಚರರು ಶ್ರೀಕಾಂತ್ ನನ್ನು ಕಿಡ್ನಾಪ್ ಮಾಡಿ ಆತನ ಮೇಲೆ ಹಲ್ಲೆ ನಡೆಸಿದ್ದರು. ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.