ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಮಾಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಜೀಪ್ ಗಳಲ್ಲಿ ಸಿಸಿಬಿ ಪೊಲೀಸರು ಬಂಧಿದ್ದು, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಬೆಳಗ್ಗೆ 5.30ಕ್ಕೆ ಜೈಲಿನಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದು, ಮೊಬೈಲ್ ಗಳು, ಸಿಮ್ ಕಾರ್ಡ್ ಹಾಗೂ ಗಾಂಜಾ ಸೇದುವ ಪೈಪ್ ಗಳು , ಪೆನ್ ಡ್ರೈವ್ ಪತ್ತೆಯಾಗಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ 100 ಮಂದಿ ಪೊಲೀಸರು ದಾಳಿ ಮಾಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಚ್ ಆಗುತ್ತಿದ್ದಂತೆ ಜೈಲಾಧಿಕಾರಿಗಳ ಅಗಮಿಸಿದ್ದು, ಸಿಸಿಬಿ ಪೊಲೀಸರ ಪರಿಶೀಲನೆ ವೇಳೆ ಜೊತೆಯಲ್ಲೇ ಜೈಲಾಧಿಕಾರಿಗಳು ಇದ್ದಾರೆ. ಪ್ರತಿ ಬ್ಯಾರಕ್ ನಲ್ಲಿ ಸರ್ಚ್ ಮಾಡುತ್ತಿರುವ ಅಧಿಕಾರಿಗಳು ಹಳೇ ರೌಡಿ ಶೀಟರ್ಸ್ ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಜನರೇ ಹುಷಾರ್… ಕೊರೊನಾ ವ್ಯಾಕ್ಸಿನೇಷನ್ ಹೆಸರಿನಲ್ಲಿ ಮನೆಗೆ ನುಗ್ಗಿ ಸಿನಿಮಾ ಸ್ಟೈಲ್ನಲ್ಲಿ ದರೋಡೆ…