ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅನ್ನೋ ಗಾದೆ ಮಾತಿದೆ. ಯಾವುದೇ ಆಹಾರವನ್ನೂ ಅತಿಯಾಗಿ ಸೇವಿಸಬಾರದು. ರುಚಿ ಚೆನ್ನಾಗಿದೆ ಎಂದು ನಮ್ಮ ನಾಲಿಗೆ ಸವಿ ಬಯಸಿದರೂ, ದೇಹ ಹೆಚ್ಚುವರಿಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮ ಸಂಭವಿಸುತ್ತೆ. ಹಾಗೆಯೇ ಮಜ್ಜಿಗೆಯನ್ನು ಅತಿಯಾಗಿ ಸೇವಿಸಿದ್ರೆ ಅದರಿಂದ ದುಷ್ಪರಿಣಾಮಗಳು ಸಂಭವಿಸುತ್ತೆ.. ಈಗ ಯಾಕ್ ಈ ಮಾತು ಅಂತ ಯೋಚನೆ ಮಾಡತ್ತಿದ್ದೀರಾ ಮಿಸ್ ಮಾಡದೇ ಈ ಸ್ಟೋರಿ ಓದಿ…
ಬೇಸಿಗೆಯಲ್ಲಿ ಬಾಯಾರಿಕೆ ಕಡಿಮೆ ಆಗುವುದಿಲ್ಲ ಏನಾದ್ರೂ ತಂಪು ಪಾನೀಯ ಸೇವಿಸಬೇಕು ಅಂತ ಅನ್ನಿಸುತ್ತಿರುತ್ತೆ.. ಮಜ್ಜಿಗೆ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾನೀಯಗಳಲ್ಲಿ ಒಂದಾಗಿದೆ. ಇದು ತನ್ನ ರುಚಿ ಮತ್ತು ಆರೋಗ್ಯ ಪ್ರಯೋಜನಗಳ ಕಾರಣದಿಂದ ಎಲ್ಲರಿಗೂ ಇಷ್ಟವಾಗುತ್ತದೆ. ಮಜ್ಜಿಗೆ ಇಲ್ಲದೆ ಕೆಲವರಿಗೆ ಊಟವೇ ಅಪೂರ್ಣ, ಅದರಲ್ಲೂ ಬೇಸಿಗೆಯಲ್ಲಿ ಈ ಸಮೃದ್ಧ ಪಾನೀಯ ಕುಡಿಯದ ದಿನವೇ ಇಲ್ಲ. ಮಜ್ಜಿಗೆ ಬೇಸಿಗೆಯ ದಿನಗಳಲ್ಲಿ ತಂಪಾಗಿರಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದಾಗುವ ದುಷ್ಪರಿಣಾಮಗಳು:
1. ಶೀತ, ಜ್ವರ ಅಥವಾ ಅಲರ್ಜಿಯ ಸಮಯದಲ್ಲಿ ಮಜ್ಜಿಗೆ ಕುಡಿಯಬೇಡಿ ಅದು ಆರೋಗ್ಯದಲ್ಲಿ ಏರುಪೇರು ಉಂಟು ಮಾಡುತ್ತದೆ.
2. ಮೊಸರಿನಿಂದ ಬೆಣ್ಣೆ ತೆಗೆದ ನಂತರ ಮಜ್ಜಿಗೆಯನ್ನ ತಯಾರಿಸಲಾಗುತ್ತದೆ ಮತ್ತು ಕೆನೆ ಗಟ್ಟಿಯಾಗಲು ಹಲವು ದಿನಗಳವರೆಗೆ ಮೊಸರನ್ನು ಇಡಬೇಕಾಗುತ್ತದೆ, ಆದ್ದರಿಂದ ಮೊಸರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳವಣಿಗೆ ಹೊಂದಿ ಗಂಟಲಿನ ಸೋಂಕು ಮತ್ತು ಶೀತವನ್ನು ಉಂಟುಮಾಡುತ್ತದೆ.
3. ಮಜ್ಜಿಗೆಯಲ್ಲಿ ಹೆಚ್ಚಿನ ಸೋಡಿಯಂ ಅಂಶ ಇರುತ್ತದೆ. ಹೀಗಾಗಿ ಮೂತ್ರಪಿಂಡದ ಕಾಯಿಲೆಗಳು ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು ಮಜ್ಜಿಗೆಯನ್ನು ಸೇವಿಸಲೇಬಾರದು.
4. ಕಿಡ್ನಿ ಸಮಸ್ಯೆ, ಅಲರ್ಜಿ ಸಮಸ್ಯೆ, ಅಧಿಕ ರಕ್ತದೊತ್ತಡ ಇರುವವರು ಆದಷ್ಟು ಮಜ್ಜಿಗೆಯಿಂದ ದೂರವಿರುವುದು ಒಳಿತು. ಹೆಚ್ಚಾಗಿ ಮಜ್ಜಿಗೆ ಸೇವಿಸುವುದಕ್ಕಿಂತ ದೇಹಕ್ಕೆ ಅಗತ್ಯವಿರುವಷ್ಟು ಸೇವಿಸುವುದು ಉತ್ತಮ.
ಇದನ್ನೂ ಓದಿ : PSI ಅಕ್ರಮ ನೇಮಕಾತಿ ಕೇಸ್ನಲ್ಲಿ ಮತ್ತೊಂದು ಅರೆಸ್ಟ್… ಪ್ರಮುಖ ಆರೋಪಿ ಮಂಜುನಾಥ್ ಮೇಳಕುಂದಿ ಸರೆಂಡರ್…